alex Certify ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್….!

ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ.

ಇಂಜಿನಿಯರ್‌ ಸೆರ್ಗಿ ಗಾರ್ಡೆವ್‌‌ ವಿನೂತನವಾದ ಬೈಸಿಕಲ್ ಒಂದನ್ನು ವಿನ್ಯಾಸಗೊಳಿಸಿದ್ದಾರೆ.

ಸಾಮಾನ್ಯವಾಗಿ ಬೈಸಿಕಲ್‌ಗಳಿಗೆ ವೃತ್ತಾಕಾರದ ಚಕ್ರಗಳಿದ್ದರೆ, ಈ ಬೈಸಿಕಲ್‌ಗೆ ಚೌಕಾಕಾರದ ಚಕ್ರಗಳಿವೆ.

ಯೂಟ್ಯೂಬ್‌ನಲ್ಲಿ ಟೆಕ್‌ ಸವ್ವಿ ಚಾನೆಲ್ ಒಂದನ್ನು, ಕ್ಯೂ, ಹೊಂದಿರುವ ಸೆರ್ಗಿ ತಮ್ಮ ಲೇಟೆಸ್ಟ್‌ ಬೈಸಿಕಲ್ ವಿನ್ಯಾಸದಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಕ್ಷರಶಃ ದಂಗು ಬಡಿಸಿದ್ದಾರೆ.

ಅಂದಹಾಗೆ ಈ ಚೌಕಾಕೃತಿಯ ಚಕ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ನೋಡುಗರನ್ನು ದಂಗು ಬಡಿಸಿವೆ. ಇದರ ಕಾರ್ಯವನ್ನೊಮ್ಮೆ ನೀವೂ ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...