alex Certify ದೇವರನ್ನೇ ಪ್ರಶ್ನಿಸಿದ್ರಾ ಕೊಹ್ಲಿ…? 20 ರನ್ ಗೆ ಔಟ್ ಆದ ನಂತ್ರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರನ್ನೇ ಪ್ರಶ್ನಿಸಿದ್ರಾ ಕೊಹ್ಲಿ…? 20 ರನ್ ಗೆ ಔಟ್ ಆದ ನಂತ್ರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಪಂದ್ಯದ ಸಮಯದಲ್ಲಿ ಔಟಾದ ನಂತರ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ತೋರಿದ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ.

ಐಪಿಎಲ್ ನಲ್ಲಿ ಆರ್‌.ಸಿ.ಬಿ. – ಪಂಜಾಬ್ ಕಿಂಗ್ಸ್ ಪಂದ್ಯದ ವೇಳೆ 20 ರನ್‌ ಗಳಿಗೆ ಔಟಾದ ವಿರಾಟ್ ಕೊಹ್ಲಿ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಔಟಾಗಿದ್ದಾರೆ. ಇದರ ಬೆನ್ನಲ್ಲೇ ಅವರು ತೋರಿದ ಪ್ರತಿಕ್ರಿಯೆ ವೈರಲ್ ಆಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಕೇವಲ 20 ರನ್‌ ಗೆ ಔಟಾದರು. 14 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 20 ರನ್ ಗಳಿಸಿದ ನಂತರ ಶಾರ್ಟ್ ಫೈನ್ ಲೆಗ್‌ನಲ್ಲಿ ಕ್ಯಾಚ್ ನೀಡಿದರು. ಔಟಾದ ನಂತರ ಕೊಹ್ಲಿ ಮೇಲೆ ನೋಡುತ್ತಾ ಅಸಮಾಧಾನ ತೋರಿ ತಾವು ಔಟ್ ಆಗಿಲ್ಲವೆನ್ನುವಂತೆ ತಲೆ ಅಲ್ಲಾಡಿಸುತ್ತಾ ಪೆವಿಲಿಯನ್ ತ್ತ ಹೆಜ್ಜೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...