
ಬುಧವಾರ ನಡೆದ ಪಂದ್ಯದಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆರ್ಸಿಬಿ ಐಪಿಎಲ್ನಲ್ಲಿ ಸತತ ಎರಡನೇ ಗೆಲುವನ್ನ ತನ್ನದಾಗಿಸಿಕೊಂಡಿದೆ.
ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಟಾಸ್ ಸೋತು ಬ್ಯಾಟಿಂಗ್ ಮಾಡುವ ಮೂಲಕ ಸನ್ರೈಸರ್ಸ್ ತಂಡಕ್ಕೆ 150 ರನ್ಗಳ ಗುರಿಯನ್ನ ನೀಡಿತು.
ಈ ಗುರಿಯನ್ನ ಬೆನ್ನಟ್ಟಿದ ಸನ್ರೈಸರ್ಸ್ ತಂಡ ಆರ್ಸಿಬಿ ಬೌಲಿಂಗ್ ಕರಾಮತ್ತಿಗೆ ಸಿಲುಕಿ ಸೋಲನ್ನ ಕಂಡಿದೆ. ಈ ಮೂಲಕ ಆರ್ಸಿಬಿ ಆರು ರನ್ಗಳ ರೋಚಕ ಜಯ ಸಾಧಿಸಿತು.
ಸತತ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ಇದೀಗ ಪಾಯಿಂಟ್ ಟೇಬಲ್ನಲ್ಲಿ ಟಾಪ್ನಲ್ಲಿದೆ. ಇದರಿಂದ ಆರ್ಸಿಬಿ ಅಭಿಮಾನಿಗಳು ಫುಲ್ ಖುಶ್ ಆಗಿದ್ದು ಮೀಮ್ಸ್ ಸರಮಾಲೆಯನ್ನೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡ್ತಿದ್ದಾರೆ.
https://twitter.com/sarxaster/status/1382537434521489409