alex Certify ಭಾರ ಎತ್ತುವ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ ಕಾಶ್ಮೀರದ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರ ಎತ್ತುವ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ ಕಾಶ್ಮೀರದ ಮಹಿಳೆ….!

ರಾಜ್ಯಮಟ್ಟದ ವೇಟ್​ ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕಾಶ್ಮೀರದ ಮೊದಲ ಮಹಿಳಾ ವೇಟ್​ ಲಿಫ್ಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೈಮಾ ಅವರ ಪತಿ ಉಬೈಜ್​ ಹಫೀಜ್​​ ಅವರಿಂದ ಸ್ಫೂರ್ತಿ ಪಡೆದು ಈ ಸಾಧನೆ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸೈಮಾ, ನಾನು ಜಿಮ್​​ಗೆ ಸೇರಿದಾಗ ನನ್ನ ತೂಕ ಹೆಚ್ಚಾಗಿತ್ತು. ನನ್ನ ತೂಕವನ್ನ ಕಳೆದುಕೊಳ್ಳಲು ನನಗೆ ನನ್ನ ಪತಿ ಸಹಾಯ ಮಾಡಿದ್ರು. ನನ್ನ ಪತಿಯೇ ನನಗೆ ತರಬೇತಿ ನೀಡಿದ್ರು ಎಂದು ಹೇಳಿದ್ದಾರೆ.

27 ವರ್ಷದ ಸೈಮಾ, ನಾಲ್ಕನೇ ವರ್ಷದ ಪವರ್​ಲಿಫ್ಟಿಂಗ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕಾರ್ಯಕ್ರಮದಲ್ಲಿ ಸೈಮಾ 255 ಕೆಜಿ ತೂಕವನ್ನ ಎತ್ತಿದ್ದಾರೆ.
ಈ ದಂಪತಿ 2018ರಲ್ಲಿ ಮದುವೆಯಾಗಿದ್ದರು. ಆರೋಗ್ಯದ ಸಮಸ್ಯೆಯನ್ನ ಎದುರಿಸುತ್ತಿದ್ದ ಸೈಮಾಗೆ ವೈದ್ಯರು ಆಕೆ ಎಂದಿಗೂ ಗರ್ಭ ಧರಿಸಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ದರು. ಈ ಎಲ್ಲಾ ಸಮಸ್ಯೆಗಳನ್ನ ಎದುರಿಸಿ ಅವರು ಹೆಣ್ಣು ಮಗುವನ್ನ ಪಡೆದಿದ್ದಾರೆ.

ಹೆರಿಗೆಯಾದ ಬಳಿಕ ಸೈಮಾ ಬೆನ್ನು ಮೂಳೆಯ ಸಮಸ್ಯೆಯನ್ನ ಎದುರಿಸಿದ ಬಳಿಕ ವೈದ್ಯರು ಆಕೆಗೆ ತೂಕವನ್ನ ಇಳಿಸುವಂತೆ ಸಲಹೆ ನೀಡಿದ್ದರು. ಹೀಗಾಗಿ ಸೈಮಾ ತಮ್ಮ ತೂಕವನ್ನ ಸರಿಪಡಿಸಿಕೊಂಡಿದ್ದು ಮಾತ್ರವಲ್ಲದೇ ಈ ಸಾಧನೆಯನ್ನೂ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...