alex Certify ಹೆಸರಿನ ಕಾರಣಕ್ಕೆ ಸಖತ್ ಫೇಮಸ್ ಈ ಕ್ರಿಕೆಟಿಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರಿನ ಕಾರಣಕ್ಕೆ ಸಖತ್ ಫೇಮಸ್ ಈ ಕ್ರಿಕೆಟಿಗ..!

ಇಂಡಿಯನ್​ ಪ್ರೀಮಿಯರ್​ ಲೀಗ್​ನ 14ನೇ ಆವೃತ್ತಿಗಾಗಿ ತಮಿಳುನಾಡಿನ ಕ್ರಿಕೆಟ್​ ಪ್ಲೇಯರ್​ ಶಾರೂಖ್​ ಖಾನ್​ರನ್ನ  ಪಂಜಾಬ್ ಕಿಂಗ್ಸ್​ ತಂಡ 5.25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಕ್ರಿಕೆಟಿಗ ಶಾರೂಖ್​ ಖಾನ್​ ತಮ್ಮ ಹೆಸರಿನ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದ್ದಾರೆ.

ಶಾರೂಖ್​ ಖಾನ್​ರನ್ನ ಖರೀದಿ ಮಾಡುತ್ತಿದ್ದಂತೆಯೇ ಕೆಕೆಆರ್​ ಟೀಂ ಹಾಜರಿದ್ದ ಮೇಜಿನ ಕಡೆ ತಿರುಗಿ ನೋಡಿದ್ದ ಪ್ರೀತಿ ಝಿಂಟಾ ನಾವು ಶಾರೂಖ್​ರನ್ನೇ ಖರೀದಿ ಮಾಡಿದ್ದೇವೆ ಎಂದು ಹೇಳಿ ನಕ್ಕಿದ್ದರು. ಈ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು.

ಕಳೆದ ಬಾರಿಯ ಆವೃತ್ತಿಯಲ್ಲಿ ಶಾರೂಖ್​ಖಾನ್​ರನ್ನ ಯಾರೂ ಖರೀದಿ ಮಾಡದ ಕಾರಣ ಇವರು ನಿರಾಸೆಗೊಂಡಿದ್ದರು. ತಮಿಳುನಾಡು ಕ್ರಿಕೆಟ್​ ಲೀಗ್​​ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕವೂ ಫಲ ಸಿಗದೇ ಇದ್ದದ್ದು ಶಾರೂಖ್​ ಖಾನ್​ಗೆ ಬೇಸರ ತಂದಿತ್ತು.

ಆದರೆ ಕೊನೆಗೂ ನಾನು ಐಪಿಎಲ್​ ಆವೃತ್ತಿಗೆ ಆಯ್ಕೆಯಾಗಿದ್ದೇನೆ ಹಾಗೂ ನಾನು ನನ್ನ ಪ್ರತಿಭೆಯನ್ನ ಪ್ರದರ್ಶಿಸುತ್ತೇನೆ ಎಂದು ಶಾರೂಖ್​ ಖಾನ್​ ಹೇಳಿಕೊಂಡಿದ್ದಾರೆ.

ಬಾಲಿವುಡ್​ ನಟ ಶಾರೂಖ್​ ಖಾನ್​​ರ ಹೆಸರನ್ನ ನನಗೆ ನಾಮಕರಣ ಮಾಡುವಂತೆ ನನ್ನ ತಾಯಿಯ ಸಹೋದರಿಯರು ಒತ್ತಾಯ ಮಾಡಿದ್ದರಂತೆ. ನಾನು ಕೂಡ ಅವರ ಎಲ್ಲಾ ಸಿನಿಮಾಗಳನ್ನ ಇಷ್ಟಪಡುತ್ತೇನೆ. ಆದರೆ ಕ್ರಿಕೆಟ್​ ಮಾತ್ರ ಎಂದಿಗೂ ನನ್ನ ಮೊದಲ ಆದ್ಯತೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...