alex Certify WWE ಲೆಜೆಂಡ್, ದೈತ್ಯ ಪ್ರತಿಭೆ, ಸೂಪರ್ ಸ್ಟಾರ್ ಅಂಡರ್ ಟೇಕರ್ ಅಭಿಮಾನಿಗಳಿಗೆ ‘ಬಿಗ್ ಶಾಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WWE ಲೆಜೆಂಡ್, ದೈತ್ಯ ಪ್ರತಿಭೆ, ಸೂಪರ್ ಸ್ಟಾರ್ ಅಂಡರ್ ಟೇಕರ್ ಅಭಿಮಾನಿಗಳಿಗೆ ‘ಬಿಗ್ ಶಾಕ್’

ಡಬ್ಲ್ಯೂಡಬ್ಲ್ಯೂಇ ದಂತಕಥೆ ಕುಸ್ತಿ ಕ್ಷೇತ್ರದ ಸೂಪರ್ ಸ್ಟಾರ್ ಅಂಡರ್ ಟೇಕರ್ ನಿವೃತ್ತಿ ಘೋಷಿಸಿದ್ದಾರೆ. ದಿ ಡೆಡ್ಲಿಮ್ಯಾನ್ ಖ್ಯಾತಿಯ 55 ವರ್ಷದ ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ ಲೆಜೆಂಡ್ ಅಂಡರ್ ಟೇಕರ್ ಮತ್ತೆ ಕುಸ್ತಿಗೆ ಮರಳುವ ಮನಸ್ಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸುದೀರ್ಘ 30 ವರ್ಷಗಳಿಂದ ಆಡಿದ ಕುಸ್ತಿ ವೃತ್ತಿಯಿಂದ ನಿರ್ಗಮಿಸುವುದಾಗಿ ಹೇಳಿದ್ದಾರೆ. ಅಂಡರ್ ಟೇಕರ್ ಅವರ ಮೂಲ ಹೆಸರು ಮಾರ್ಕ್ ವಿಲಿಯಂ ಕ್ಯಾಲವೆ. 1965 ಮಾರ್ಚ್ 24 ರಂದು ಜನಿಸಿದ ಅವರು ಡಬ್ಲ್ಯೂಡಬ್ಲ್ಯೂಇ ಕುಸ್ತಿಯಲ್ಲಿ ಸಾಧನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

1990 ರಲ್ಲಿ ಮೊದಲ ಬಾರಿಗೆ ಕುಸ್ತಿಗೆ ಇಳಿದ ಅಂಡರ್ಟೇಕರ್ ಮೂರು ಸಲ ವರ್ಲ್ಡ್ ಹೆವೈವೇಯ್ಟ್ ಚಾಂಪಿಯನ್ ಶಿಪ್, 4ಸಲ ಡಬ್ಲ್ಯೂಡಬ್ಲ್ಯೂಇ, ಒಂದು ಸಲ ಡಬ್ಲ್ಯೂಡಬ್ಲ್ಯೂಎಫ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂಡರ್ ಟೇಕರ್ ನಿವೃತ್ತಿ ಘೋಷಿಸುತ್ತಿದ್ದಂತೆ ಡಬ್ಲ್ಯೂಡಬ್ಲ್ಯೂಇ ಸರಣಿ ಟ್ವೀಟ್ ಗಳ ಮೂಲಕ ಧನ್ಯವಾದ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...