alex Certify ಶೇ. 70 ರಷ್ಟು ಮೇಲ್ಜಾತಿಯವರೇ ಇರುವ ಭಾರತ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಜಾರಿಗೆ ನಟ ಚೇತನ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ. 70 ರಷ್ಟು ಮೇಲ್ಜಾತಿಯವರೇ ಇರುವ ಭಾರತ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಜಾರಿಗೆ ನಟ ಚೇತನ್ ಆಗ್ರಹ

ಚಾಮರಾಜನಗರ: ಭಾರತ ಕ್ರಿಕೆಟ್ ತಂಡದಲ್ಲಿ ಶೇಕಡ 70ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲೂ ಮೀಸಲಾತಿ ನೀಡಬೇಕು ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.

ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮೀಸಲಾತಿ ಪ್ರಾತಿನಿಧ್ಯವೋ ಆರ್ಥಿಕ ಸಬಲೀಕರಣವೋ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

2016 ರಿಂದ ದಕ್ಷಿಣ ಆಫ್ರಿಕಾ ತಂಡದಲ್ಲಿ ಆರು ಜನ ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಭಾರತೀಯ ಕ್ರಿಕೆಟ್ ತಂಡದಲ್ಲಿಯೂ ಮೀಸಲಾತಿ ತರಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ಶೇಕಡ 70ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ನೀಡಿದರೆ ಟೀಂ ಇಂಡಿಯಾ ಇನ್ನಷ್ಟು ಉತ್ತಮವಾಗಲಿದೆ. ಹೀಗಾಗಿ ಕ್ರಿಕೆಟ್ ನಲ್ಲಿಯೂ ಮೀಸಲಾತಿ ಜಾರಿಯಾಗಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...