alex Certify ಟಿ-20 ವಿಶ್ವಕಪ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ-20 ವಿಶ್ವಕಪ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15 ರ ವರೆಗೆ ಟಿ-20 ವಿಶ್ವಕಪ್ ನಿಗದಿಯಾಗಿದೆ. ಕೊರೋನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡುವ ಇಲ್ಲವೇ ರದ್ದುಪಡಿಸುವ ಕುರಿತು ಚಿಂತನೆ ನಡೆದಿದೆ.

ಕೆಲವೇ ದಿನಗಳಲ್ಲಿ ಪಂದ್ಯಾವಳಿಯನ್ನು ರದ್ದು ಮಾಡುವ ಇಲ್ಲವೇ ಮುಂದೂಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ತಿಳಿಸಿದೆ.

ಕೊರೋನಾ ಸೋಂಕಿನ ಕಾರಣದಿಂದ ಈ ವರ್ಷ ನಿಗದಿಯಾಗಿದ್ದ ಹಲವು ಕ್ರೀಡಾಕೂಟ, ಪಂದ್ಯಾವಳಿಗಳನ್ನು ರದ್ದು ಮಾಡಲಾಗಿದೆ. ಮತ್ತೆ ಕೆಲವು ಪಂದ್ಯಾವಳಿಗಳನ್ನು ಮುಂದೂಡಲಾಗಿದೆ. ಟಿ20 ವಿಶ್ವಕಪ್ ಮುಂದೂಡುವ ಕುರಿತು ಚರ್ಚೆ ನಡೆದಿದೆ.

ಪಂದ್ಯಾವಳಿ ನಡೆಸುವ ಬಗ್ಗೆ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನೂ ಆರು ತಿಂಗಳು ಸಮಯವಿದ್ದು, ಚರ್ಚೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...