ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೇಟ್ರಿ ತಮ್ಮ ಅಭಿಮಾನಿಯ ಆಸೆಯಂತೆ ನೆಟ್ ಫ್ಲಿಕ್ಸ್ ಜತೆ ಒಟಿಟಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ.
ಚೇಟ್ರಿ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಅವರ ಅಭಿಮಾನಿಯೊಬ್ಬ ಅವರ ನೆಟ್ಫ್ಲಿಕ್ಸ್ ಯೂಸರ್ ಐಡಿ , ಪಾಸ್ ವರ್ಡ್ ಕೇಳಿದ್ದ.
“ಸುನೀಲ್ ಭಾಯ್ ಗಿವ್ ಮಿ ಯುವರ್ ನೆಟ್ ಫ್ಲಿಕ್ಸ್ ಯೂಸರ್ ಐಡಿ, ಪಾಸ್ ವರ್ಡ್, ಲಾಕ್ ಡೌನ್ ಕೆ ಬಾದ್ ಪಾಸ್ ವರ್ಡ್ ಚೇಂಜ್ ಕರ್ ಲೇನಾ” ಎಂದು ಬರೆದಿದ್ದ.
ಅಭಿಮಾನಿಯ ಆಸೆ ತೀರಿಸಲು ಮುಂದಾದ ಚೇಟ್ರಿ, ನೆಟ್ ಫ್ಲಿಕ್ಸ್ ಇಂಡಿಯಾಗೆ ಅವರಿಗೆ ಬಂದ ಟ್ವೀಟ್ ಟ್ಯಾಗ್ ಮಾಡಿದ್ದರು. ನೆಟ್ ಫ್ಲಿಕ್ಸ್ ಸುನೀಲ್ ಬಳಿ ನೀವು ಸೈನ್ ಮಾಡಿದ ಟಿ ಶರ್ಟ್ ಒಂದನ್ನು ಕಳಿಸಿಕೊಡಿ ಎಂದು ಕೇಳಿತ್ತು. ಅದಕ್ಕೆ ಒಪ್ಪಿದ ಸುನೀಲ್ ತಮ್ಮ ಅಭಿಮಾನಿಗೆ ಎರಡು ತಿಂಗಳ ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಶನ್ ನೀಡುವಂತೆ ಕೇಳಿದ್ದಾರೆ.
ನೆಟ್ ಫ್ಲಿಕ್ಸ್ ಅಭಿಮಾನಿಗೆ ಉಚಿತ ಸಬ್ಸ್ ಸ್ಕ್ರಿಪ್ಶನ್ ನೀಡಿದೆ. ಛೇತ್ರಿ ನೆಟ್ ಫ್ಲಿಕ್ಸ್ ಇಂಡಿಯಾಗೊಂದು, ತನ್ನ ಅಭಿಮಾನಿಗೊಂದು ಪ್ರತ್ಯೇಕ ಟೀಶರ್ಟ್ ಕಳಿಸಿಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಚೇಟ್ರಿ ಮತ್ತೊಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಸುನೀಲ್ ವಿಶ್ವದ ಎರಡನೇ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರರಾಗಿದ್ದಾರೆ.