alex Certify ಎಬಿಡಿ​ ಹೊಡೆತಕ್ಕೆ ಕಾರಿನ ಗಾಜು ಪುಡಿ ಪುಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಬಿಡಿ​ ಹೊಡೆತಕ್ಕೆ ಕಾರಿನ ಗಾಜು ಪುಡಿ ಪುಡಿ…!

ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಉತ್ತಮ ಫಾರ್ಮ್​ನಲ್ಲಿರೋ ರಾಯಲ್​ ಚಾಲೆಂಜರ್ಸ್​ ತಂಡ ಸೋಮವಾರ ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ. ಶಾರ್ಜಾ ಮೈದಾನದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ನಡೆದ ಮ್ಯಾಚ್​ನಲ್ಲಿ ಆರ್​ಸಿಬಿ 82 ರನ್​​ಗಳ ಭರ್ಜರಿ ವಿಜಯ ದಾಖಲಿಸಿದೆ.

ಆರ್​​ಸಿಬಿ ಅಂದಾಕ್ಷಣ ನೆನಪಾಗೋ ಕ್ರಿಕೆಟ್​ ಪ್ಲೇಯರ್ಸ್​ಗಳಲ್ಲಿ ಎಬಿ ಡಿವಿಲಿಯರ್ಸ್ ಸಹ ಒಬ್ರು. ಸೋಮವಾರ ನಡೆದ ಮ್ಯಾಚ್​ನಲ್ಲೂ ಸಹ ಕೇವಲ 33 ಎಸೆತಗಳಲ್ಲಿ 73 ರನ್​ ದಾಖಲಿಸಿ ತಂಡದ ಗೆಲುವಿಗೆ ಮುಖ್ಯ ಕಾರಣ ಎನಿಸಿಕೊಂಡ್ರು.

ಕೊಲ್ಕತ್ತಾ ವಿರುದ್ಧ ಟಾಸ್​ ಗೆದ್ದಿದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರ್​ಸಿಬಿ 94 ರನ್​ಗೆ 2 ವಿಕೆಟ್​ ನಷ್ಟದಲ್ಲಿದ್ದಾಗ ಕ್ರೀಸ್​ಗೆ ಬಂದ ಎಬಿಡಿ ರನ್​ಗಳ ಸುರಿಮಳೆಗೈದರು. ಕೆಕೆಆರ್​ ಬೌಲರ್ಸ್​ಗಳನ್ನ ಬಗ್ಗುಬಡಿದ ಎಬಿಡಿ 6 ಸಿಕ್ಸ್ ಹಾಗೂ 5 ಬೌಂಡರಿಗಳನ್ನ ಬಾರಿಸಿದ್ದಾರೆ. ಇದರಲ್ಲಿ ಮೂರು ಸಿಕ್ಸ್ ಸ್ಟೇಡಿಯಂನಿಂದ ಹೊರಹೋಗಿದೆ. ಈ ಬಾಲ್​ ಸ್ಟೇಡಿಯಂ ಪಕ್ಕದಲ್ಲಿ ಹಾದು ಹೋಗ್ತಿದ್ದ ಕಾರಿನ ಗಾಜನ್ನ ಪೀಸ್​ ಪೀಸ್​ ಮಾಡಿಹಾಕಿದೆ.

ಎಬಿಡಿ ಸಿಕ್ಸರ್​ಗೆ ಕಾರಿನ ಗಾಜು ಪುಡಿಯಾದ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಹಾಟ್ ​ಕೇಕ್​ನಂತೆ ಶೇರ್​ ಆಗ್ತಿದೆ. ಸಾಕಷ್ಟು ಮೀಮ್ಸ್ ಗಳ ಮೂಲಕ ಎಬಿಡಿ ಬ್ಯಾಟಿಂಗ್​ ಶೈಲಿಯನ್ನ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...