alex Certify BIG NEWS: ಅಪಘಾತದಲ್ಲಿ ಸವಾರ ಸಾವು, ಕಾರ್ ಚಾಲನೆ ಮಾಡುತ್ತಿದ್ದ ಖ್ಯಾತ ಕ್ರಿಕೆಟಿಗ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪಘಾತದಲ್ಲಿ ಸವಾರ ಸಾವು, ಕಾರ್ ಚಾಲನೆ ಮಾಡುತ್ತಿದ್ದ ಖ್ಯಾತ ಕ್ರಿಕೆಟಿಗ ಅರೆಸ್ಟ್

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಆಟಗಾರ ಕುಶಾಲ್ ಮೆಂಡಿಸ್ ಅವರನ್ನು ಪೊಲೀಸರು ಬಂಧಿಸಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಿದ್ದಾರೆ.

ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಕುಶಾಲ್ ಮೆಂಡಿಸ್ ಅವರನ್ನು ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ 64 ವರ್ಷದ ಸೈಕಲ್ ಸವಾರರೊಬ್ಬರಿಗೆ ಕುಶಾಲ್ ಮೆಂಡಿಸ್ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸೈಕಲ್ ಸವಾರ ಮೃತಪಟ್ಟಿದ್ದಾರೆ.

ಕೊಲಂಬೋದ ದಕ್ಷಿಣ ಪನಾಡುರಾದಲ್ಲಿ ಅಪಘಾತ ಸಂಭವಿಸಿದ್ದು ಮ್ಯಾಜಿಸ್ಟ್ರೇಟ್ ಎದುರು ಕುಶಾಲ್ ಅವರನ್ನು ಹಾಜರುಪಡಿಸಲಾಗುವುದು. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿರುವ 25 ವರ್ಷದ ಕುಶಾಲ್ ಮೆಂಡಿಸ್ 76 ಏಕದಿನ, 26 ಟಿ20 ಹಾಗೂ 44 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...