alex Certify ಬರೋಬ್ಬರಿ 7 ವರ್ಷಗಳ ಬಳಿಕ ಕ್ರಿಕೆಟ್​ ಅಂಗಳದಲ್ಲಿ ವಿಕೆಟ್​ ಪಡೆದ ವೇಗಿ ಶ್ರೀಶಾಂತ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 7 ವರ್ಷಗಳ ಬಳಿಕ ಕ್ರಿಕೆಟ್​ ಅಂಗಳದಲ್ಲಿ ವಿಕೆಟ್​ ಪಡೆದ ವೇಗಿ ಶ್ರೀಶಾಂತ್​..!

ಐಪಿಎಲ್​ ಸ್ಪಾಟ್​ ಫಿಕ್ಸಿಂಗ್​ ಆರೋಪ ಹೊತ್ತು ಬಿಸಿಸಿಐನಿಂದ 2013ರಲ್ಲಿ ನಿಷೇಧಕ್ಕೊಳಗಾಗಿದ್ದ ವೇಗಿ ಶ್ರೀಶಾಂತ್ ಇದೀಗ ಮತ್ತೆ ಕ್ರಿಕೆಟ್​ ಅಂಗಳಕ್ಕೆ ವಾಪಸ್ಸಾಗಿದ್ದಾರೆ.

ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ಕೇರಳ ತಂಡದ ಪರ ಶ್ರೀಶಾಂತ್​ ಆಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ತಮ್ಮ ಮೊದಲ ಪಂದ್ಯದಲ್ಲೇ ಶ್ರೀಶಾಂತ್​ ವಿಕೆಟ್​ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 7 ವರ್ಷಗಳ ಬಳಿಕ ಶ್ರೀಶಾಂತ್​​ ಬೌಲಿಂಗ್​​ ಕರಾಮತ್ತನ್ನ ಕಂಡು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ವ್ಯಾಪಕವಾಗಿ ಹಂಚಿಕೊಳ್ತಿದ್ದಾರೆ.

ಕೇರಳ ಹಾಗೂ ಪುದುಚೇರಿ ತಂಡದ ನಡುವಿನ ಪಂದ್ಯದಲ್ಲಿ ಎದುರಾಳಿ ತಂಡ ಓಪನಿಂಗ್​ ಬ್ಯಾಟ್ಸಮನ್​​ ಫಾಬಿದ್​ ಅಹ್ಮದ್​ರನ್ನ ಶ್ರೀಶಾಂತ್​ ಬೋಲ್ಡ್ ಮಾಡಿದ್ದಾರೆ. ಈ ಮೂಲಕ ಬರೋಬ್ಬರಿ 2804 ದಿನಗಳ ಬಳಿಕ ಶ್ರೀಶಾಂತ್​ ತಮ್ಮ ಜೀವನದಲ್ಲಿ ಈ ಸಾಧನೆ ಮಾಡಿದಂತಾಗಿದೆ. 4 ಓವರ್​ಗಳಲ್ಲಿ ಶ್ರೀಶಾಂತ್​ 29 ರನ್​ಗಳನ್ನ ನೀಡಿ 7.20 ಎಕಾನಮಿ ಕಾಪಾಡಿಕೊಂಡಿದ್ದಾರೆ.

— div (@div_yumm) January 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...