alex Certify ವಾರದ ಅಂತರದಲ್ಲೇ 2 ಟ್ರೋಫಿ ಎತ್ತಿ ಹಿಡಿದ ಕ್ರಿಕೆಟರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರದ ಅಂತರದಲ್ಲೇ 2 ಟ್ರೋಫಿ ಎತ್ತಿ ಹಿಡಿದ ಕ್ರಿಕೆಟರ್…!

ಮಂಗಳವಾರ ಮುಕ್ತಾಯಗೊಂಡ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಕರಾಚಿ ಕಿಂಗ್ಸ್​ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾಹೋರ್​​ ಖಲಂದರ್ಸ್ ವಿರುದ್ಧ ಐದು ವಿಕೆಟ್​ಗಳಿಂದ ಗೆಲುವು ಸಾಧಿಸಿದ ಕರಾಚಿ ಕಿಂಗ್ಸ್​ ಟ್ರೋಫಿಗೆ ಮುತ್ತಿಕ್ಕಿದೆ.

ಪಾಕಿಸ್ತಾನ ಸೂಪರ್​ ಲೀಗ್​​ನಲ್ಲಿ ಕರಾಚಿ ಕಿಂಗ್ಸ್​​ ಚಾಂಪಿಯನ್​ ಆಗಿದ್ದು ಇದೇ ಮೊದಲನೇ ಬಾರಿಗೆ. ಆದರೆ ಕರಾಚಿ ಕಿಂಗ್ಸ್ ತಂಡದ ಆಟಗಾರ ಶೆರ್ಫೇನ್​ ರುದರ್​ಫೋರ್ಡ್ ಮಾತ್ರ ಟ್ವಿಟರ್​ನಲ್ಲಿ ಸಾಕಷ್ಟು ಟ್ರೋಲ್​​ಗೆ ಒಳಗಾಗಿದ್ದಾರೆ.

ನವೆಂಬರ್​ 17ರಂದು ಪಿಎಸ್​ಎಲ್​​​ ಟ್ರೋಫಿ ಎತ್ತಿದ ರುದರ್​ಫೋರ್ಡ್​, ನವೆಂಬರ್​ 10ರಂದು ಇಂಡಿಯನ್​ ಪ್ರಿಮೀಯರ್​ ಲೀಗ್​​ನಲ್ಲೂ ಚಾಂಪಿಯನ್​ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 22 ವರ್ಷದ ಈ ಕ್ರಿಕೆಟಿಗ ಮುಂಬೈ ಇಂಡಿಯನ್ಸ್​​ನ ಒಂದೇ ಒಂದು ಪಂದ್ಯದಲ್ಲಿ ಪ್ರದರ್ಶನ ತೋರದೇ ಇದ್ದರೂ ಸಹ 7 ದಿನಗಳ ಅವಧಿಯಲ್ಲಿ 2 ಟಿ 20 ಲೀಗ್ ​​ಗಳಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಈ ಹಿಂದೆ ಕರಾಚಿ ಕಿಂಗ್ಸ್​ ಪರ ಆಡುವಾಗ ಎಂಐ ತಂಡದ ಗ್ಲೌಸ್​ ಧರಿಸುವ ಮೂಲಕ ಸುದ್ದಿಯಾಗಿದ್ದರು.

— Johns. (@CricCrazyJohns) November 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...