alex Certify ಸಿರಾಜ್​ ಸಂಭ್ರಮಕ್ಕೆ ಸಂತಸ ವ್ಯಕ್ತಪಡಿಸಿದ ಶಾರ್ದೂಲ್​: ವೈರಲ್​ ಆಯ್ತು ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿರಾಜ್​ ಸಂಭ್ರಮಕ್ಕೆ ಸಂತಸ ವ್ಯಕ್ತಪಡಿಸಿದ ಶಾರ್ದೂಲ್​: ವೈರಲ್​ ಆಯ್ತು ಫೋಟೋ

ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ನಡೆದ ಅಂತಿಮ ಟೆಸ್ಟ್​​ ಪಂದ್ಯದ ನಾಲ್ಕನೇ ದಿನವಾದ ಇಂದು ಟೀಂ ಇಂಡಿಯಾ ವೇಗಿಗಳಾದ ಶಾರ್ದೂಲ್​ ಠಾಕೂರ್​ ಹಾಗೂ ಮೊಹಮ್ಮದ್​ ಸಿರಾಜ್​ ತಮ್ಮ ಅದ್ಭುತ ಬೌಲಿಂಗ್​ ಪ್ರದರ್ಶನದ ಮೂಲಕ ಕಿವೀಸ್​ ಆಟಗಾರರನ್ನ ಕಟ್ಟಿ ಹಾಕಿದ್ದಾರೆ.

54 ರನ್​ಗಳ ಮುನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ಟೀಂ ಇಂಡಿಯಾ ಬೌಲರ್​ಗಳಾದ ಸಿರಾಜ್​ ಹಾಗೂ ಠಾಕೂರ್​ ಆಸ್ಟ್ರೇಲಿಯಾ ಆಟಗಾರರಿಗೆ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದು ಆಸ್ಟ್ರೇಲಿಯಾ 294 ರನ್​ಗಳಿಗೆ ಆಲೌಟ್​ ಆಗಿದೆ.

ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 5, ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್​ ಸಿರಾಜ್​ ಹಾಗೂ ಶಾರ್ದೂಲ್​ ಠಾಕೂರ್​ 5ನೇ ವಿಕೆಟ್​ಗಾಗಿ ಶ್ರಮಿಸುತ್ತಿದ್ದರು.

ಆದರೆ ಕೊನೆಯದಾಗಿ 5ನೇ ವಿಕೆಟ್​​ ಸಿರಾಜ್​ ಪಾಲಾಗಿದೆ. ಈ ವೇಳೆ ಸಿರಾಜ್​ ಚೆಂಡನ್ನ ಪ್ರದರ್ಶಿಸುತ್ತದಂತೆಯೇ ಶಾರ್ದೂಲ್​ ಸಂತೋಷ ವ್ಯಕ್ತಪಡಿಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಬ್ಬರೂ ಒಂದೇ ಗುರಿಗಾಗಿ ಸ್ಪರ್ಧಿಸುತ್ತಿದ್ದರೂ ಸಹ ಸ್ವಲ್ಪವೂ ಅಸೂಯೆ ಪಡದ ಶಾರ್ದೂಲ್​ ಠಾಕೂರ್​ರನ್ನ ನೆಟ್ಟಿಗರು ಹಾಡಿ ಹೊಗಳ್ತಿದ್ದಾರೆ. ಇದು ಟೀಂ ಇಂಡಿಯಾದ ಶಕ್ತಿ ಎಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ.

— ICC (@ICC) January 18, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...