alex Certify ಸಂಜನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಜಸ್ಪ್ರೀತ್​ ಬೂಮ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಜಸ್ಪ್ರೀತ್​ ಬೂಮ್ರಾ

ಟೀಂ ಇಂಡಿಯಾ ಆಟಗಾರ ಜಸ್ಪ್ರೀತ್​ ಬೂಮ್ರಾ ಮದುವೆ ವಿಚಾರವಾಗಿ ಹುಟ್ಟಿದ್ದ ಎಲ್ಲಾ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಕ್ರೀಡಾ ನಿರೂಪಕಿ ಸಂಜನಾ ಗಣೇಶನ್​​ರನ್ನ ಜಸ್ಪ್ರೀತ್​ ಬೂಮ್ರಾ ವಿವಾಹವಾಗಲಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ತಂಡದಲ್ಲಿದ್ದ ಬೂಮ್ರಾ ನಾಲ್ಕನೇ ಟೆಸ್ಟ್​ಗೂ ಮುನ್ನ ತಂಡದಿಂದ ಹೊರಬಂದಿದ್ರು.

ಇದೇ ತಿಂಗಳು ಈ ಜೋಡಿ ಹಸಮಣೆ ಏರಲಿದ್ದು ಈ ಬಗ್ಗೆ ಬೂಮ್ರಾ ಆಗಲಿ ಇಲ್ಲವೇ ಸಂಜನಾ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಮಾಡೆಲ್​ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಂಜನಾ ಇದೀಗ ಕ್ರೀಡಾ ನಿರೂಪಕಿ ಆಗಿದ್ದಾರೆ. ಇವರು ಸ್ಟಾರ್​ಸ್ಪೋರ್ಟ್ಸ್​ನಲ್ಲಿ ಮ್ಯಾಚ್​ ಪಾಯಿಂಟ್​ ಹಾಗೂ ಚೀಕಿ ಸಿಂಗಲ್ಸ್ ಎಂಬ ಶೋಗಳನ್ನ ನಡೆಸಿಕೊಟ್ಟಿದ್ದಾರೆ. ಇದು ಮಾತ್ರವಲ್ಲದೇ ಪ್ರೀಮಿಯರ್​ ಬ್ಯಾಡ್ಮಿಂಟನ್​ ಲೀಗ್​​ನ ‘ದಿಲ್​ ಸೇ ಇಂಡಿಯಾ’ ಎಂಬ ಶೋವನ್ನೂ ಸಂಗೀತಾ ನಡೆಸಿಕೊಟ್ಟಿದ್ದರು.

ಬೂಮ್ರಾ ಇಂಗ್ಲೆಂಡ್​ ಸರಣಿ ಮಧ್ಯದಲ್ಲೇ ಹೊರಬಂದಿರೋದೇ ಮದುವೆ ಸಿದ್ಧತೆಗಾಗಿ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐ ಬಳಿ ಮದುವೆ ಸಿದ್ಧತೆಯ ಕಾರಣವನ್ನೇ ನೀಡಿ ಬೂಮ್ರಾ ರಜೆಯನ್ನ ಪಡೆದಿದ್ದಾರೆ ಎನ್ನಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...