alex Certify ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ದ ಕೊಹ್ಲಿ: ಇದರ ಹಿಂದಿನ ಕಾರಣ ಬಹಿರಂಗಪಡಿಸಿದ ʼಕ್ರಿಕೆಟ್‌ ದೇವರುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದಿದ್ದ ಕೊಹ್ಲಿ: ಇದರ ಹಿಂದಿನ ಕಾರಣ ಬಹಿರಂಗಪಡಿಸಿದ ʼಕ್ರಿಕೆಟ್‌ ದೇವರುʼ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಷ್ಟಪಡದ ಜನರಿಲ್ಲ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ದೇವರ ಜೊತೆ ಸ್ವಲ್ಪ ಸಮಯ ಕಳೆದ್ರೂ ಜೀವನ ಸಾರ್ಥಕ ಎನ್ನುವವರಿದ್ದಾರೆ. ಆದ್ರೆ ಅನೇಕ ಕ್ರಿಕೆಟರ್ಸ್ ಅವ್ರ ಜೊತೆ ಮೈದಾನ, ಡ್ರೆಸ್ಸಿಂಗ್ ರೂಮಿನಲ್ಲಿ ಸಮಯ ಕಳೆದಿದ್ದಾರೆ. ಅವರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಒಬ್ಬರು.

ಸಚಿನ್ ಜೊತೆಗಿರುವಾಗ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಮತ್ತು ಮುನಾಫ್ ಪಟೇಲ್, ವಿರಾಟ್ ಜೊತೆ ಫ್ರ್ಯಾಂಕ್ ಮಾಡಿದ್ದರಂತೆ. ಆ ತಮಾಷೆ ಸಮಯವನ್ನು ಸಚಿನ್ ತೆಂಡೂಲ್ಕರ್ ಬಹಿರಂಗಪಡಿಸಿದ್ದಾರೆ. ಯುಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್, 2008ರಲ್ಲಿ ಕೊಹ್ಲಿ ಟೀಂ ಇಂಡಿಯಾ ಸೇರಿದಾಗ ಉಳಿದ ಆಟಗಾರರು ಹೇಗೆ ತಮಾಷೆ ಮಾಡಿದ್ದರು ಎಂಬುದನ್ನು ಹೇಳಿದ್ದಾರೆ.

ಒಂದೇ ಮಂಟಪದಲ್ಲಿ ಅಕ್ಕ, ತಂಗಿಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಕಾಲುಗಳ ಮೇಲೆ ಬಿದ್ದಾಗ ಸಚಿನ್ ಅಚ್ಚರಿಗೊಂಡಿದ್ದರಂತೆ. ಏನು ಮಾಡ್ತಿದ್ದಾರೆಂಬುದು ಅರ್ಧವಾಗ್ಲಿಲ್ಲವಂತೆ. ನೀವು ಹೀಗೆಲ್ಲ ಮಾಡುವ ಅಗತ್ಯವಿಲ್ಲವೆಂದು ಸಚಿನ್ ಹೇಳಿದ್ದರಂತೆ. ಕೊಹ್ಲಿ ಹಿಂದೆ ನಿಂತಿದ್ದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ನಗ್ತಿದ್ದರಂತೆ.

ಯುವರಾಜ್, ಹರ್ಭಜನ್ ಸಿಂಗ್, ಕೊಹ್ಲಿಗೆ ಹೀಗೆ ಮಾಡುವಂತೆ ಹೇಳಿದ್ದರಂತೆ. ಸಚಿನ್ ಡ್ರೆಸ್ಸಿಂಗ್ ರೂಮಿಗೆ ಬರ್ತಿದ್ದಂತೆ ಕಾಲಿಗೆ ಬೀಳಬೇಕು. ಇದು ನಮ್ಮ ಪದ್ಧತಿ. ಎಲ್ಲರೂ ಇದನ್ನು ಪಾಲಿಸಿದ್ದೇವೆ. ಈಗ ನಿಮ್ಮ ಸರದಿ ಎಂದಿದ್ದರಂತೆ. ಇದನ್ನು ನಂಬಿದ ಕೊಹ್ಲಿ, ಸಚಿನ್ ಕಾಲಿಗೆ ಬಿದ್ದಿದ್ದರಂತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...