alex Certify ಎಂ.ಎಸ್. ಧೋನಿ ಹಿಂದಿಕ್ಕಿದ ರಿಷಬ್ ಪಂತ್ ಐತಿಹಾಸಿಕ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂ.ಎಸ್. ಧೋನಿ ಹಿಂದಿಕ್ಕಿದ ರಿಷಬ್ ಪಂತ್ ಐತಿಹಾಸಿಕ ದಾಖಲೆ

ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ ವಿಕೆಟ್ ಹಿಂದೆ ನಾಲ್ಕು ಕ್ಯಾಚ್ ಪಡೆದ ರಿಷಬ್ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 100 ಕ್ಯಾಚ್ ಪಡೆದ ಭಾರತೀಯ ಆಟಗಾರನೆಂಬ ದಾಖಲೆ ಬರೆದಿದ್ದಾರೆ

ಎಂಎಸ್ ಧೋನಿ 36 ಟೆಸ್ಟ್ ಪಂದ್ಯಗಳಲ್ಲಿ 100 ಕ್ಯಾಚ್ ಪಡೆದಿದ್ದಾರೆ. ಅವರೊಂದಿಗೆ ವೃದ್ಧಿಮಾನ್ ಸಹಾ 36 ಟೆಸ್ಟ್ ಪಂದ್ಯಗಳಲ್ಲಿ 100 ಕ್ಯಾಚ್ ಪಡೆದಿದ್ದು, ರಿಷಬ್ ಪಂತ್ ಕೇವಲ 26 ಪಂದ್ಯಗಳಲ್ಲಿ 100 ಕ್ಯಾಚ್ ಪಡೆಯುವ ಮೂಲಕ ದಾಖಲೆ ಹಿಂದಿಕ್ಕಿದ್ದಾರೆ.

ಕಿರಣ್ ಮೋರೆ 39 ಟೆಸ್ಟ್ ಪಂದ್ಯಗಳಲ್ಲಿ 100 ಕ್ಯಾಚ್ ಪಡೆದಿದ್ದು, ನಯನ್ ಮೊಂಗಿಯಾ 41 ಟೆಸ್ಟ್ ಪಂದ್ಯಗಳಲ್ಲಿ, ಸೈಯದ್ ಕೀರ್ಮಾನಿ 42 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಧೋನಿ ಟೆಸ್ಟ್ ಕ್ರಿಕೆಟ್ ನಲ್ಲಿ 256 ಕ್ಯಾಚ್, 38 ಸ್ಟಂಪಿಂಗ್ ನೊಂದಿಗೆ 294 ವಿಕೆಟ್ ಉರುಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...