alex Certify ಎರಡನೇ ಪಂದ್ಯದಲ್ಲೂ RCB ಗೆ ಭರ್ಜರಿ ಜಯ: ಗೆಲುವಿನ ರೂವಾರಿಗಳಾದ ಶಹಬಾಜ್, ಮಾಕ್ಸ್ವೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಪಂದ್ಯದಲ್ಲೂ RCB ಗೆ ಭರ್ಜರಿ ಜಯ: ಗೆಲುವಿನ ರೂವಾರಿಗಳಾದ ಶಹಬಾಜ್, ಮಾಕ್ಸ್ವೆಲ್

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್ ಗಳಿಂದ ಗೆಲುವು ಕಂಡಿದೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಸನ್ ರೈಸರ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರೂ, ಆರ್ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಸ್ಫೋಟಕ ಅರ್ಧಶತಕ ಸಿಡಿಸಿದರು. ಆರ್ಸಿಬಿ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಕೊಹ್ಲಿ 33, ಮ್ಯಾಕ್ಸ್ವೆಲ್ 59 ರನ್ ಗಳಿಸಿದರು. ಗೆಲುವಿನ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲು ಕಂಡಿದೆ. ಗೆಲುವಿನತ್ತ ಹೆಜ್ಜೆ ಹಾಕಿದ್ದ ಸನ್ ರೈಸರ್ಸ್ ಕೊನೆ 46 ರನ್ ಗೆ 8 ವಿಕೆಟ್ ಕಳೆದುಕೊಂಡಿತು. ಆರ್ಸಿಬಿ ಶಹಾಬಾಜ್ ಮೂರು ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...