
ಕೆಲ ದಿನಗಳ ಹಿಂದಷ್ಟೇ ಗೂಗಲ್ ಅನುಶ್ಕಾ ಶರ್ಮಾ ಪತಿ ರಶೀದ್ ಖಾನ್ ಎಂದು ತೋರಿಸ್ತಾ ಇದ್ದಿದ್ದರಿಂದ ಸುದ್ದಿಯಾಗಿದ್ದ ಸನ್ ರೈಸರ್ಸ್ ತಂಡದ ಬ್ಯಾಟ್ಸ್ಮನ್ ರಶೀದ್ ಖಾನ್ ಇದೀಗ ಒಂದೇ ಬಾಲಿಗೆ ಎರಡು ಸರಿ ಔಟ್ ಆಗೋ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಂತಹದ್ದೊಂದು ಅಚ್ಚರಿ ಘಟನೆ ನಡೆದಿದೆ.
ಶಾರ್ದೂಲ್ ಠಾಕೂರ್ ಬೌಲ್ಗೆ ಸಿಕ್ಸರ್ ಬಾರಿಸೋಕೆ ರಶೀದ್ ಪ್ರಯತ್ನ ಪಟ್ಟಿದ್ರು. ಆದರೆ ದೀಪಕ್ ಚಹರ್ ಬೌಲ್ನ ಕ್ಯಾಚ್ ಹಿಡಿಯೋ ಮೂಲಕ ರಶೀದ್ರನ್ನ ಔಟ್ ಮಾಡಿದ್ರು. ಆದರೆ ಇನ್ನೊಂದು ಅಚ್ಚರಿ ವಿಚಾರ ಅಂದರೆ ಈ ಬಾಲಿಗೆ ಸಿಕ್ಸರ್ ಬಾರಿಸೋ ಭರದಲ್ಲಿ ರಶೀದ್ ಅವರ ಶೂ ವಿಕೆಟ್ ಸ್ಟಂಪ್ಗೆ ತಾಕಿದ್ದರಿಂದ ಅವರು ಸ್ಟಂಪೌಂಟ್ ಆಗಿದ್ದಾರೆ.
ಈ ದೃಶ್ಯವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡ್ತಿರೋ ನೆಟ್ಟಿಗರು ಇಂತಹದ್ದೊಂದು ಅನುಭವವನ್ನ ಕ್ರಿಕೆಟ್ನಲ್ಲಿ ನೋಡೇ ಇರಲಿಲ್ಲ ಅಂತಾ ಬರೆದುಕೊಳ್ತಿದ್ದಾರೆ.
https://twitter.com/ryandesa_07/status/1316082816782802945?ref_src=twsrc%5Etfw%7Ctwcamp%5Etweetembed%7Ctwterm%5E1316082816782802945%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fhit-wicket-or-caught-rashid-khans-rare-twin-dismissal-in-same-ball-makes-twitter-revisit-cricket-laws-2961770.html