alex Certify ಅಚ್ಚರಿಯಾದ್ರೂ ಇದು ನಿಜ…! ಒಂದೇ ಬಾಲಿಗೆ ಎರಡು ಬಾರಿ ಔಟ್​ ಆದ ರಶೀದ್​ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದ್ರೂ ಇದು ನಿಜ…! ಒಂದೇ ಬಾಲಿಗೆ ಎರಡು ಬಾರಿ ಔಟ್​ ಆದ ರಶೀದ್​ ಖಾನ್

Rashid Khan's Bizarre 'Twin' Dismissal in Same Ball Makes Twitter Revisit Cricket Laws

ಕೆಲ ದಿನಗಳ ಹಿಂದಷ್ಟೇ ಗೂಗಲ್​ ಅನುಶ್ಕಾ ಶರ್ಮಾ ಪತಿ ರಶೀದ್​​ ಖಾನ್​ ಎಂದು ತೋರಿಸ್ತಾ ಇದ್ದಿದ್ದರಿಂದ ಸುದ್ದಿಯಾಗಿದ್ದ ಸನ್​ ರೈಸರ್ಸ್ ತಂಡದ ಬ್ಯಾಟ್ಸ್​ಮನ್​ ರಶೀದ್​​ ​ ಖಾನ್​ ಇದೀಗ ಒಂದೇ ಬಾಲಿಗೆ ಎರಡು ಸರಿ ಔಟ್​ ಆಗೋ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಮಂಗಳವಾರ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಂತಹದ್ದೊಂದು ಅಚ್ಚರಿ ಘಟನೆ ನಡೆದಿದೆ.

ಶಾರ್ದೂಲ್​ ಠಾಕೂರ್​ ಬೌಲ್​ಗೆ ಸಿಕ್ಸರ್​ ಬಾರಿಸೋಕೆ ರಶೀದ್​ ಪ್ರಯತ್ನ ಪಟ್ಟಿದ್ರು. ಆದರೆ ದೀಪಕ್​ ಚಹರ್​ ಬೌಲ್​ನ ಕ್ಯಾಚ್​ ಹಿಡಿಯೋ ಮೂಲಕ ರಶೀದ್​ರನ್ನ ಔಟ್​ ಮಾಡಿದ್ರು. ಆದರೆ ಇನ್ನೊಂದು ಅಚ್ಚರಿ ವಿಚಾರ ಅಂದರೆ ಈ ಬಾಲಿಗೆ ಸಿಕ್ಸರ್​ ಬಾರಿಸೋ ಭರದಲ್ಲಿ ರಶೀದ್​​​ ಅವರ ಶೂ ವಿಕೆಟ್​​ ಸ್ಟಂಪ್​ಗೆ ತಾಕಿದ್ದರಿಂದ ಅವರು ಸ್ಟಂಪೌಂಟ್​ ಆಗಿದ್ದಾರೆ.

ಈ ದೃಶ್ಯವನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡ್ತಿರೋ ನೆಟ್ಟಿಗರು ಇಂತಹದ್ದೊಂದು ಅನುಭವವನ್ನ ಕ್ರಿಕೆಟ್​ನಲ್ಲಿ ನೋಡೇ ಇರಲಿಲ್ಲ ಅಂತಾ ಬರೆದುಕೊಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...