
20 ಲಕ್ಷ ಮೂಲ ಮೊತ್ತದಲ್ಲಿದ್ದ ಶಾರೂಖ್ ಖಾನ್ರನ್ನ ಖರೀದಿ ಮಾಡಿದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕಡೆ ಮುಖ ಮಾಡಿದ ನೋಡಿದ ಪ್ರೀತಿ ಝಿಂಟಾ, ನಾನು ಶಾರೂಖ್ರನ್ನ ಪಡೆದಿದ್ದೇವೆ ಎಂದು ಹೇಳಿದ್ದಾರೆ.
25 ವರ್ಷದ ಆಲ್ರೌಂಡರ್ ಶಾರೂಖ್ ಖಾನ್ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದಾರೆ. 2018ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ 20ಗೆ ಪದಾರ್ಪಣೆ ಮಾಡಿದ ಶಾರೂಖ್ ಖಾನ್ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದಾರೆ.
ಪ್ರೀತಿ ಝಿಂಟಾ ಕ್ರಿಕೆಟಿಗ ಶಾರೂಖ್ ಖಾನ್ರನ್ನ ಖರೀದಿ ಮಾಡುತ್ತಿದ್ದಂತೆಯೇ ಟ್ವಿಟರ್ನಲ್ಲಿ ಟ್ರೋಲ್ಗಳ ಸುರಿಮಳೆಯೇ ಹರಿದಿದೆ. ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಲ್ಲೂ ಪ್ರೀತಿ ಜಿಂಟಾ ಕೆಕೆಆರ್ ಟೇಬಲ್ ಕಡೆ ಮುಖ ಮಾಡಿ ಮಾತನಾಡುತ್ತಿರೋ ವಿಡಿಯೋವನ್ನ ಶೇರ್ ಮಾಡಲಾಗಿದ್ದು ವಿಡಿಯೋ ವೈರಲ್ ಆಗಿದೆ.
https://twitter.com/meme_casticc/status/1362368534408437763