alex Certify ಹೈವೋಲ್ಟೇಜ್ ಮ್ಯಾಚ್ ನಲ್ಲಿ ಸೋಲು: ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಎಂದಿಗೂ ಗೆಲ್ಲದ ʼರಹಸ್ಯʼ ಬಿಚ್ಚಿಟ್ಟ ಪಾಕಿಸ್ತಾನ ಆಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈವೋಲ್ಟೇಜ್ ಮ್ಯಾಚ್ ನಲ್ಲಿ ಸೋಲು: ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಎಂದಿಗೂ ಗೆಲ್ಲದ ʼರಹಸ್ಯʼ ಬಿಚ್ಚಿಟ್ಟ ಪಾಕಿಸ್ತಾನ ಆಟಗಾರ

Abdul Razzaq to resume First-Class cricket career after five-year ...

ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಎಂದಿಗೂ ಗೆದ್ದಿಲ್ಲ. ಅಂದ ಹಾಗೆ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಪಂದ್ಯವೆಂದರೆ ಹೈ ವೋಲ್ಟೇಜ್ ಮ್ಯಾಚ್ ಎಂದೇ ಅರ್ಥ.

ಇಡೀ ಕ್ರಿಕೆಟ್ ಲೋಕದ ಗಮನ ಸೆಳೆಯುವ ಪಂದ್ಯವಾಗಿರುತ್ತದೆ. ಅದರಲ್ಲಿಯೂ ವಿಶ್ವಕಪ್ ಪಂದ್ಯವಂತೂ ಭಾರಿ ಗಮನ ಸೆಳೆಯುತ್ತದೆ. ವಿಶ್ವಕಪ್ ನಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಾಗಿಲ್ಲ. ಪಾಕಿಸ್ತಾನ ಸತತ ಸೋಲಿಗೆ ಕಾರಣವೇನು ಎಂಬುದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್-ರೌಂಡರ್ ಅಬ್ದುಲ್ ರಜಾಕ್ ಬಿಚ್ಚಿಟ್ಟಿದ್ದಾರೆ.

ಮೊದಲೇ ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಒತ್ತಡದಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ತಂಡದ ಆಟಗಾರರು ಒತ್ತಡ ಎದುರಿಸಲಾಗದೆ ಸೋಲು ಕಾಣುತ್ತಾರೆ ಎಂದು ರಜಾಕ್ ತಿಳಿಸಿದ್ದಾರೆ.

ಮೊದಲು ಭಾರತ ವಿರುದ್ಧ ನಡೆಯುತ್ತಿದ್ದ ಪಂದ್ಯ, ಸರಣಿಗಳಲ್ಲಿ ನಾವು ಗೆಲುವು ಸಾಧಿಸುತ್ತಿದ್ದೆವು. ಈಗ ಭಾರತ ಮತ್ತು ಪಾಕ್ ತಂಡಗಳ ನಡುವೆ ಪಂದ್ಯ ನಡೆಯುತ್ತಿಲ್ಲ. ವಿಶ್ವಕಪ್ ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಒತ್ತಡ ನಿರ್ವಹಿಸಲು ಸಾಧ್ಯವಾಗದೇ ಪಾಕ್ ತಂಡ ಸೋಲುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...