alex Certify ಶತಕ ಗಳಿಸಿದರೂ ಸಂಭ್ರಮಿಸಲಿಲ್ಲ ಆಟಗಾರ್ತಿ…! ಇದರ ಹಿಂದಿದೆ ಮನಕಲಕುವ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಕ ಗಳಿಸಿದರೂ ಸಂಭ್ರಮಿಸಲಿಲ್ಲ ಆಟಗಾರ್ತಿ…! ಇದರ ಹಿಂದಿದೆ ಮನಕಲಕುವ ಕಾರಣ

ಡುನೆಡಿನ್​​ನಲ್ಲಿ ಒಟಾಗೋ ವಿರುದ್ಧ ನಡೆದ ಪಂದ್ಯದಲ್ಲಿ ವೆಲ್ಲಿಂಗ್ಟನ್​ ಬ್ಲೇಜ್​ ತಂಡದ ಪರ ಆಡುತ್ತಿದ್ದ ನ್ಯೂಜಿಲೆಂಡ್​ ತಂಡದ ನಾಯಕಿ ಸೋಫಿ ಡಿವೈನ್​ ಗುರುವಾರ ಮಹಿಳಾ ಟಿ 20ಯಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ. ಕೇವಲ 36 ಎಸೆತಗಳಳ್ಲಿ ಸೂಫಿ ತಮ್ಮ ಮೈಲಿಗಲ್ಲನ್ನ ತಲುಪಿದ್ರು.

94 ರನ್​ ಗಳಿಸಿದ್ದ ಡಿವೈನ್​ ತಮ್ಮ ಮುಂದಿನ ಎಸೆತದಲ್ಲಿ ಸಿಕ್ಸ್ ಬಾರಿಸಿದ್ದಾರೆ. ಆದರೆ ಈ ವೇಳೆ ಚೆಂಡು ತಾಯಿಯ ಮಡಿಲಿನಲ್ಲಿ ಕುಳಿತಿದ್ದ ಪುಟ್ಟ ಹುಡುಗಿಗೆ ಹೋಗಿ ಬಡಿದಿದೆ. ಕೂಡಲೇ ಯುವ ಅಭಿಮಾನಿಯ ಬಳಿ ಧಾವಿಸಿದ ಡೈನ್​ ಅಳುತ್ತಿದ್ದ ಮಗುವಿನ ಮುಂದೆ ಮಂಡಿಯೂರಿ ಕೂತು ಮಾತನಾಡಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಪುಟ್ಟ ಬಾಲಕಿಯ ಬಗ್ಗೆ ಡಿವೈನ್​ ತೋರಿಸಿದ ಕಾಳಜಿಯನ್ನ ನೆಟ್ಟಿಗರು ಕೊಂಡಾಡಿದ್ದಾರೆ. ತಮ್ಮ ದಾಖಲೆಯನ್ನ ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಬಾಲಕಿಯ ಆರೋಗ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಕ್ಕೆ ಗೌರವ ದುಪ್ಪಟ್ಟಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

— Cricket on BT Sport (@btsportcricket) January 14, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...