alex Certify ಟಿ20 ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸೋಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸೋಲು

ಕ್ವೀನ್ಸ್‌ ಟೌನ್: ನ್ಯೂಜಿಲೆಂಡ್‌ನ ಕ್ವೀನ್ಸ್‌ ಟೌನ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ 18 ರನ್‌ ಗಳಿಂದ ಸೋತಿದೆ.

156 ರನ್ ಗುರಿ ಬೆನ್ನಟ್ಟಲು ಭಾರತೀಯ ಮಹಿಳೆಯರು ಪರದಾಟ ನಡೆಸಿದ್ದಾರೆ. ಏಕೈಕ T20I ನಲ್ಲಿ ನ್ಯೂಜಿಲೆಂಡ್ ಮಹಿಳೆಯರು ಭಾರತ ಮಹಿಳೆಯರನ್ನು ಸೋಲಿಸಿದ್ದಾರೆ. 156 ರನ್‌ ಗಳ ಬೆನ್ನಟ್ಟಿದ ಭಾರತದ ವನಿತೆಯರು ವಿಫಲರಾದರು.

ಮೊದಲು ಬ್ಯಾಟಿಂಗ್ ಮಾಡಿದ NZ ಮಹಿಳೆಯರು ನಿಗದಿತ 20 ಓವರ್‌ಗಳಲ್ಲಿ 155/5 ಗಳಿಸಿದರು. ಸುಜಿ ಬೇಟ್ಸ್ 36, ಸೋಫಿ ಡಿವೈನ್ 31, ಮ್ಯಾಡಿ ಗ್ರೀನ್ 26, ಲಿಯಾ ತಹುಹು 27 ರನ್ ಗಳಿಸಿದರು. ಭಾರತದ ಪರ ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್‌ ಸೇರಿಸಿದರು.

ಗೆಲುವಿನ ಗುರಿ ಬೆನ್ನತ್ತಿದ್ದ ಭಾರತದ ಪರ ಯಾಸ್ತಿಕಾ ಭಾಟಿಯಾ 26, ಶಫಾಲಿ ವರ್ಮಾ 13, ಹರ್ಮನ್‌ಪ್ರೀತ್ ಕೌರ್ 12, ಸಬ್ಬಿನೇನಿ ಮೇಘನಾ 37 ರನ್ ಗಳಿಸಿದರು. ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137  ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ಜೆಸ್ ಕೆರ್, ಅಮೆಲಿಯಾ ಕೆರ್ ಮತ್ತು ಹೇಲಿ ಜಾನ್ಸೆನ್ ಎರಡು ವಿಕೆಟ್ ಪಡೆದರು.

ಫೆಬ್ರವರಿ 12 ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...