alex Certify 24 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ ದಾಖಲೆ

ನೊವಾಕ್ ಜೊಕೊವಿಕ್ ಯುಎಸ್ ಓಪನ್ ನಲ್ಲಿ 24 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಯುಎಸ್ ಓಪನ್ ಫೈನಲ್‌ನಲ್ಲಿ ಸೆರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ರಷ್ಯಾದ ಡೇನಿಯಲ್ ಮೆಡ್ವೆಡೆವ್ ತೀವ್ರ ಪೈಪೋಟಿ ನಡೆಸಿದರು. 1 ಗಂಟೆ 44 ನಿಮಿಷಗಳವರೆಗೆ ವಿಸ್ತರಿಸಿದ ಎರಡನೇ ಸೆಟ್‌ನಲ್ಲಿ ಅರ್ಧದಾರಿಯಲ್ಲೇ ಇಬ್ಬರು ಟೆನಿಸ್ ದಿಗ್ಗಜರು 32-ಸ್ಟ್ರೋಕ್ ರ್ಯಾಲಿಯಲ್ಲಿ ತೊಡಗಿದರು.

ಫ್ಲಶಿಂಗ್ ಮೆಡೋಸ್‌ನಲ್ಲಿ ಮೆಡ್ವೆಡೆವ್ ವಿರುದ್ಧ 6-3, 7-6 (5), 6-3 ಅಂಕಗಳಿಂದ ಜೊಕೊವಿಕ್ ವಿಜಯಶಾಲಿಯಾದರು. ಈ ಗೆಲುವು ಜೊಕೊವಿಕ್‌ಗೆ ಐತಿಹಾಸಿಕ 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ತಂದುಕೊಟ್ಟಿತು.

ಜೊಕೊವಿಕ್ ಅವರು ಸೆರೆನಾ ವಿಲಿಯಮ್ಸ್‌ ಗಿಂತ ಮುಂದೆ ಸಾಗಿ ಓಪನ್ ಯುಗದಲ್ಲಿ ಅತಿ ಹೆಚ್ಚು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...