ಮಾಡೆಲ್ ಹಾಗೂ ನಟಿ ನತಾಶಾ ತಮ್ಮ ಮುದ್ದಾದ ಮಗು ಅಗಸ್ತ್ಯನಿಗಾಗಿ ಇನ್ಸ್ಟಾಗ್ರಾಂ ಖಾತೆ ತೆರೆದಿರೋದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಈ ನಟಿ ತಮ್ಮ ಕಂದಮ್ಮನ ಮೂರನೇ ತಿಂಗಳ ಸಂಭ್ರಮದ ಕ್ಷಣವನ್ನ ಹಂಚಿಕೊಂಡಿದ್ದಾರೆ .
ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯಾರನ್ನ ವಿವಾಹವಾಗಿದ್ದ ನತಾಶಾ ಜುಲೈ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಹಾರ್ದಿಕ್ ಐಪಿಎಲ್ ಸೀಸನ್ಗಾಗಿ ಯುಎಇನಲ್ಲಿ ತಂಗಿದ್ದಾರೆ. ಹೀಗಾಗಿ ಮಗನಿಗೆ ಮೂರು ತಿಂಗಳಾದ ಹಿನ್ನೆಲೆ ಕೇಕ್ ಕಟ್ ಮಾಡಿ ಸಂಭ್ರಮಿಸಿದೋರ ಜೊತೆಗೆ ಪತಿ ಹಾರ್ದಿಕ್ ಪಾಂಡ್ಯಾರನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.
ಇದರ ಜೊತೆಯಲ್ಲಿ ತಮ್ಮ ಮಗುವಿನ ಜೊತೆ ಆಡುತ್ತಿರುವ ವಿಡಿಯೋವನ್ನೂ ಶೇರ್ ಮಾಡಿದ್ದಾರೆ . ಅಗಸ್ತ್ಯನ ಮುದ್ದಾದ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.