alex Certify ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು….! ಶೇ.70ರಷ್ಟು ಆಸ್ತಿ ಕಳೆದುಕೊಳ್ಳಲಿದ್ದಾರಾ ಕ್ರಿಕೆಟಿಗ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು….! ಶೇ.70ರಷ್ಟು ಆಸ್ತಿ ಕಳೆದುಕೊಳ್ಳಲಿದ್ದಾರಾ ಕ್ರಿಕೆಟಿಗ……?

ಈ ಬಾರಿಯ ಐಪಿಎಲ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಸಾಕಷ್ಟು ಕಹಿ ಅನುಭವಗಳನ್ನು ನೀಡಿದೆ. ಹಾರ್ದಿಕ್‌ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದಲ್ಲದೇ ಟೂರ್ನಿಯುದ್ದಕ್ಕೂ ಹಾರ್ದಿಕ್‌ ಪಾಂಡ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರೋಹಿತ್ ಶರ್ಮಾ ಬದಲಿಗೆ ಅವರನ್ನು ತಂಡದ ಕ್ಯಾಪ್ಟನ್‌ ಮಾಡಿರುವುದು ಅಭಿಮಾನಿಗಳನ್ನು ಕೆರಳಿಸಿತ್ತು.

ಐಪಿಎಲ್ ಬಳಿಕ ಹಾರ್ದಿಕ್‌ ಪಾಂಡ್ಯಾರ ವೈಯಕ್ತಿಕ ಬದುಕಿನಲ್ಲೂ ಏರಿಳತಗಳು ಆರಂಭವಾಗಿವೆ. ಹಾರ್ದಿಕ್ ಮತ್ತು ಪತ್ನಿ ನತಾಶಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹಾರ್ದಿಕ್‌ ಪಾಂಡ್ಯಾರ ಪತ್ನಿ ನತಾಶಾ ಸ್ಟಾಂಕೋವಿಕ್, ತಮ್ಮ ಇನ್‌ಸ್ಟಾಗ್ರಾಮ್‌ನಿಂದ ‘ಪಾಂಡ್ಯ’ ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆ. ಹಾಗಾಗಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡ್ತಿದೆ.

ಅಷ್ಟೇ ಅಲ್ಲ ವಿಚ್ಛೇದನದ ಬಳಿ ಹಾರ್ದಿಕ್ ತಮ್ಮ ಶೇ.70ರಷ್ಟು ಆಸ್ತಿಯನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದೂ ಹೇಳಲಾಗುತ್ತಿದೆ. ಹಾರ್ದಿಕ್‌ ತಮ್ಮ ಆಸ್ತಿಯಲ್ಲಿ ಶೇ.70ರಷ್ಟನ್ನು ಪತ್ನಿಯ ಹೆಸರಿಗೆ ಮಾಡಿದ್ದಾರೆ ಎಂಬ ವದಂತಿ ಇದೆ. ಈ ವರದಿಗೆ ಪುಷ್ಠಿ ಕೊಡುವಂತೆ ನತಾಶಾ ಕೂಡ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದು, ಒಬ್ಬ ವ್ಯಕ್ತಿ ಸದ್ಯದಲ್ಲೇ ಬೀದಿಗೆ ಬರಲಿದ್ದಾರೆ ಎಂದು ಹೇಳುವ ಮೂಲಕ ಹಾರ್ದಿಕ್‌ ಪಾಂಡ್ಯಾಗೆ ಪರೋಕ್ಷ ಟಾಂಗ್‌ ಕೊಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ 2020ರ ಜನವರಿ 20ರಂದು ನತಾಶಾ ಸ್ಟಾಂಕೋವಿಕ್‌ಗೆ ಪ್ರಪೋಸ್ ಮಾಡಿದ್ದರು. ಜುಲೈ 30ರಂದು ದಂಪತಿಗೆ ಗಂಡು ಮಗುವಾಗಿತ್ತು. ಮಗುವಿನ ಜನನದ ಬಳಿಕ ಹಾರ್ದಿಕ್‌ ಹಾಗೂ ನತಾಶಾ ಅಧಿಕೃತವಾಗಿ ಮದುವೆಯಾಗಿದ್ದರು. ಕಳೆದ ಐಪಿಎಲ್ ಸೀಸನ್ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ನತಾಶಾ ಕ್ರೀಡಾಂಗಣದಲ್ಲಿ ಹಾಜರಿದ್ದು, ಹಾರ್ದಿಕ್‌ಗೆ ಚಿಯರ್‌ ಮಾಡಿದ್ದರು. ಆದರೆ ಪ್ರಸ್ತುತ IPL ಋತುವಿನಲ್ಲಿ ನತಾಶಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್‌ಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...