alex Certify ಹಾರ್ದಿಕ್​ ಪಾಂಡ್ಯಾರನ್ನ ಮಿಸ್​ ಮಾಡಿಕೊಳ್ತಿದ್ದಾರಂತೆ ನತಾಶಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ದಿಕ್​ ಪಾಂಡ್ಯಾರನ್ನ ಮಿಸ್​ ಮಾಡಿಕೊಳ್ತಿದ್ದಾರಂತೆ ನತಾಶಾ..!

ಮಾಡೆಲ್​ ಹಾಗೂ ನಟಿ ನತಾಶಾ ತಮ್ಮ ಮುದ್ದಾದ ಮಗು ಅಗಸ್ತ್ಯನಿಗಾಗಿ ಇನ್​ಸ್ಟಾಗ್ರಾಂ ಖಾತೆ ತೆರೆದಿರೋದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಈ ನಟಿ ತಮ್ಮ ಕಂದಮ್ಮನ ಮೂರನೇ ತಿಂಗಳ ಸಂಭ್ರಮದ ಕ್ಷಣವನ್ನ ಹಂಚಿಕೊಂಡಿದ್ದಾರೆ .

ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯಾರನ್ನ ವಿವಾಹವಾಗಿದ್ದ ನತಾಶಾ ಜುಲೈ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಹಾರ್ದಿಕ್​ ಐಪಿಎಲ್​ ಸೀಸನ್​ಗಾಗಿ ಯುಎಇನಲ್ಲಿ ತಂಗಿದ್ದಾರೆ. ಹೀಗಾಗಿ ಮಗನಿಗೆ ಮೂರು ತಿಂಗಳಾದ ಹಿನ್ನೆಲೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದೋರ ಜೊತೆಗೆ ಪತಿ ಹಾರ್ದಿಕ್​ ಪಾಂಡ್ಯಾರನ್ನ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.

ಇದರ ಜೊತೆಯಲ್ಲಿ ತಮ್ಮ ಮಗುವಿನ ಜೊತೆ ಆಡುತ್ತಿರುವ ವಿಡಿಯೋವನ್ನೂ ಶೇರ್​ ಮಾಡಿದ್ದಾರೆ . ಅಗಸ್ತ್ಯನ ಮುದ್ದಾದ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...