alex Certify ರಾಹುಲ್​​ ದ್ರಾವಿಡ್​ರ ʼಇಂದಿರಾನಗರ ಗೂಂಡಾʼ ಡೈಲಾಗ್ ಫುಲ್‌ ವೈರಲ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್​​ ದ್ರಾವಿಡ್​ರ ʼಇಂದಿರಾನಗರ ಗೂಂಡಾʼ ಡೈಲಾಗ್ ಫುಲ್‌ ವೈರಲ್.​..!

ಟೀಂ ಇಂಡಿಯಾ ಲೆಜೆಂಡ್​ ಆಟಗಾರ ರಾಹುಲ್​ ದ್ರಾವಿಡ್​​ ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲಿಂಗ್​ ಮೊದಲ ಪಂದ್ಯದ ದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಸೃಷ್ಟಿಸಿದ್ರು. ಸದಾ ಶಾಂತ ರೀತಿಯಲ್ಲಿ ವರ್ತಿಸುವ ರಾಹುಲ್​ ದ್ರಾವಿಡ್​ ಈ ಜಾಹಿರಾತಿನಲ್ಲಿ ತಮ್ಮ ಕ್ರೋಧದ ಮುಖ ತೋರಿಸಿದ್ದು ಹಿಂದೆಂದೂ ಕಾಣದ ಈ ದೃಶ್ಯವನ್ನ ಕಂಡ ಅಭಿಮಾನಿಗಳು ಫಿದಾ ಆಗೋಗಿದ್ರು.

ಕ್ರೆಡಿಟ್ ಕಾರ್ಡ್​ ಪೇಮೆಂಟ್​ ಅಪ್ಲಿಕೇಶನ್​​ನ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಈ ರೀತಿಯ ನಟನೆಯನ್ನ ಮಾಡಿದ್ದರು. ಸದಾ ಕೂಲ್​ ಆಗೇ ಇರೋ ದ್ರಾವಿಡ್​ ಅದಕ್ಕಿಂತ ಸಂಪೂರ್ಣ ವಿರುದ್ಧವಾದ ಭಾವದಲ್ಲಿ ಕಾಣಿಸಿಕೊಂಡಿದ್ದು ನೋಡುಗರಿಗೆ ಭಾರೀ ಮಜಾ ನೀಡಿತ್ತು.

ಈ ವಿಡಿಯೋ ಸೋಶಿಯಲ್​ ಮೀಡಿಯಾದ ಎಲ್ಲಾ ವೇದಿಕೆಗಳಲ್ಲೂ ಧೂಳೆಬ್ಬಿಸಿತ್ತು. ಅದರಲ್ಲೂ ದ್ರಾವಿಡ್​ರ ʼಇಂದಿರಾ ನಗರ್​ ಕಾ ಗೂಂಡಾ ಹೂ ಮೇʼ ಎಂಬ ಡೈಲಾಗ್​ ಅಂತೂ ಎಷ್ಟರ ಮಟ್ಟಿಗೆ ಸುದ್ದಿಯಾಗಿದೆ ಅಂದರೆ ಪೊಲೀಸ್​ ಇಲಾಖೆ ಕೂಡ ಈ ಜಾಹೀರಾತನ್ನ ಜನಜಾಗೃತಿಗಾಗಿ ಬಳಸಿಕೊಳ್ಳುವಂತಾಗಿದೆ.

ಇದೀಗ ಮುಂಬೈ ಪೊಲೀಸರು ಕೂಡ ಈ ವಿಡಿಯೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು, ಈ ಮೂಲಕ ಮಾಸ್ಕ್​ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸೂರತ್​ ಪೊಲೀಸ್​ ಇಲಾಖೆ ಕೂಡ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್​ ಮಾಡಿದೆ.

ಸೂರತ್​ ಹಾಗೂ ಮುಂಬೈ ಪೊಲೀಸರನ್ನ ಹೊರತುಪಡಿಸಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಹಾಗೂ ಫುಡ್​ ಡೆಲಿವರಿ ಅಪ್ಲಿಕೇಶನ್​ ಜೊಮೆಟೊ ಕೂಡ ಇಂದಿರಾನಗರದ ಈ ಫನ್ನಿ ಲೈನ್​ನ್ನು ಬಳಕೆ ಮಾಡಿದ್ದಾರೆ.

View this post on Instagram

A post shared by Mumbai Police (@mumbaipolice)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...