alex Certify ಹೊಸ ಬ್ಯುಸಿನೆಸ್ ಶುರು ಮಾಡಿದ ಕ್ರಿಕೆಟರ್ ಮೊಹಮ್ಮದ್ ಶಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬ್ಯುಸಿನೆಸ್ ಶುರು ಮಾಡಿದ ಕ್ರಿಕೆಟರ್ ಮೊಹಮ್ಮದ್ ಶಮಿ

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮತ್ತೊಂದು ಕಡೆ ಮೊಹಮ್ಮದ್ ಶಮಿ ವಿಶ್ರಾಂತಿಯಲ್ಲಿದ್ದಾರೆ. ಈ ವೇಳೆ ಶಮಿ ತಮ್ಮ ಹೊಸ ಬ್ಯುಸಿನೆಸ್ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.

ಮಣಿಕಟ್ಟಿನ ಗಾಯದಿಂದ ಬಳಲುತ್ತಿರುವ ಶಮಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಆಡ್ತಿಲ್ಲ. ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಮಧ್ಯೆ ಶಮಿ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಶಮಿ ಹಿತ್ತಾಳೆ ಶೋ ವಸ್ತುಗಳ ಮಾರಾಟ ಶುರು ಮಾಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿರುವ ಶಮಿ, ಹೊಸ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೆ ಅದ್ರ ಪ್ರಚಾರ ಮಾಡಿದ್ದಾರೆ.

ಸೆಲೆಬ್ರಿಟಿ ಟ್ವೀಟ್​ ವಾರ್​ ಮಧ್ಯೆ ಏಕತೆಯ ಸಂದೇಶ ಸಾರಿದ ಟೀಂ ಇಂಡಿಯಾ ಆಟಗಾರರು

ಹೊಸ ಹಿತ್ತಾಳೆ ವಸ್ತುಗಳು ಮಾರಾಟಕ್ಕೆ ಸಿದ್ಧವಾಗಿವೆ. ಆರ್ಡರ್ ಗಾಗಿ shami1194@icloud.com ಗೆ ಮೇಲ್ ಮಾಡಿ ಎಂದು ಶಮಿ ಬರೆದಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡ್ತಿರುವ ಶಮಿ ವೈಯಕ್ತಿಕ ಜೀವನ ಸರಿಯಾಗಿಲ್ಲ. ದಾಂಪತ್ಯ ಮುರಿದು ಬಿದ್ದಿದ್ದು, ಪ್ರಕರಣ ಕೋರ್ಟ್ ನಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...