alex Certify IPL ನಲ್ಲಿ ವಿಚಿತ್ರ ದಾಖಲೆ ಬರೆದ ರೋಹಿತ್​ ಶರ್ಮಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL ನಲ್ಲಿ ವಿಚಿತ್ರ ದಾಖಲೆ ಬರೆದ ರೋಹಿತ್​ ಶರ್ಮಾ….!

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್​ ಶರ್ಮಾ ಇಂಡಿಯನ್ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅತಿ ಹೆಚ್ಚು ಸೊನ್ನೆ ರನ್​ ದಾಖಲಿಸುವ ಮೂಲಕ ದುರದೃಷ್ಟಕರ ದಾಖಲೆ ಬರೆದಿದ್ದಾರೆ.

ಮುಂಬೈ ಇಂಡಿಯನ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಕ್ವಾಲಿಫಯರ್​ ಪಂದ್ಯದಲ್ಲಿ ಆರ್. ಅಶ್ವಿನ್​ರ ಎಸೆತಕ್ಕೆ ಔಟ್ ಆಗಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ರನ್​ ಗಳಿಸದೇ 13ನೇ ಬಾರಿಗೆ ರೋಹಿತ್​ ಔಟ್​ ಆಗಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಹರ್ಭಜನ್​ ಸಿಂಗ್​ ಹಾಗೂ ಆರ್​ಸಿಬಿಯ ಪಾರ್ಥಿವ್​ ಪಟೇಲ್​ ಕೂಡ 13 ಸೊನ್ನೆ ಗಳಿಸಿದ ದಾಖಲೆ ಮಾಡಿದ್ದಾರೆ. ಇದೀಗ ಈ ಸಾಲಿಗೆ ರೋಹಿತ್​ ಶರ್ಮಾ ಕೂಡ ಸೇರಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಸ್ಕೋರರ್​ ಆಗಿರುವ ರೋಹಿತ್​ ಐಪಿಎಲ್​ ಪ್ಲೇ ಆಫ್​ನಲ್ಲಿ ಕಳಪೆ ಸಾಧನೆ ಮಾಡಿದ್ದಾರೆ.

— IndianPremierLeague (@IPL) November 5, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...