alex Certify ಬರಿಗಾಲಲ್ಲಿ ಮಂಜಿನ ರಾಶಿ ಮೇಲೆ ಓಡಿ ವಿಶ್ವ ದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗಾಲಲ್ಲಿ ಮಂಜಿನ ರಾಶಿ ಮೇಲೆ ಓಡಿ ವಿಶ್ವ ದಾಖಲೆ…!

ಬರಿಗಾಲಿನಲ್ಲಿ ಮಂಜುಗಡ್ಡೆಯ ರಾಶಿಯ ಮೇಲೆ ನಡೆದಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಈ ಸಾಧನೆಯನ್ನ ಮಾಡಬೇಕು ಅಂದರೆ ಹಲವಾರು ಸಮಯದ ತರಬೇತಿಯಂತೂ ಬೇಕೆ ಬೇಕು.

ಆದರೆ ಜೋಸಾನ್​ ಫೆಲ್ಡೆ ಎಂಬಾತ 1 ಗಂಟೆ 44 ನಿಮಿಷ 58 ಸೆಕೆಂಡ್​ಗಳ ಕಾಲ ಮಂಜಿನ ರಾಶಿ ಮೇಲೆ ಬರಿಗಾಲಲ್ಲಿ ಓಡಿ ಹಾಫ್​ ಮ್ಯಾರಥಾನ್​​ ಗುರಿ ಮುಟ್ಟುವ ಮೂಲಕ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾರೆ.

ಈ ವ್ಯಕ್ತಿಯ ಈ ಗಿನ್ನೆಸ್​ ದಾಖಲೆಯ ಸಾಧನೆಯ ವಿಡಿಯೋವನ್ನ ಯುಟ್ಯೂಬ್​ನಲ್ಲಿ ಶೇರ್​ ಮಾಡಲಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನಾನು ವಿಮ್​​ ಹಾಫ್​ರ ಗಿನ್ನೆಸ್​ ದಾಖಲೆಯನ್ನ ಮುರಿಯಲು ಯತ್ನಿಸಿದೆ. ಇದು ನನ್ನ ಜೀವನದಲ್ಲೇ ನಾನು ಎದುರಿಸಿದ ಕಠಿಣ ಸವಾಲು ಎಂದು ಯುಟ್ಯೂಬ್​ನಲ್ಲಿ ಜೋಸಾನ್​ ಶೀರ್ಷಿಕೆ ನೀಡಿದ್ದಾರೆ. 2007ರಲ್ಲಿ ವಿಮ್ ಹಾಫ್​​ 2 ಗಂಟೆ 16 ನಿಮಿಷ 34 ಸೆಕೆಂಡ್ ಅವಧಿಯಲ್ಲಿ ಹಾಫ್​ ಮ್ಯಾರಥಾನ್​ ಕ್ರಮಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...