alex Certify 119 ಗಂಟೆಗಳ ಕಾಲ ತಡೆರಹಿತವಾಗಿ ಅಡುಗೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ ಬಾಣಸಿಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

119 ಗಂಟೆಗಳ ಕಾಲ ತಡೆರಹಿತವಾಗಿ ಅಡುಗೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ ಬಾಣಸಿಗ….!

ನಿರಂತರವಾಗಿ 119 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ಐರಿಶ್ ಬಾಣಸಿಗನೊಬ್ಬ ಎರಡು ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಹೌದು, ಅಲನ್ ಫಿಶರ್ ಗಿನ್ನಿಸ್ ವಿಶ್ವದಾಖಲೆ ಮಾಡಿದ ಐರಿಶ್ ಬಾಣಸಿಗ. 119 ಗಂಟೆ 57 ನಿಮಿಷಗಳ ಕಾಲ ಅಡುಗೆಯನ್ನು ತಡೆರಹಿತವಾಗಿ ಮಾಡಿದ್ದಾರೆ. ಇದು ನೈಜೀರಿಯಾದ ಬಾಣಸಿಗ ಹಿಲ್ಡಾ ಬಾಸಿ ಅವರ ಹಿಂದಿನ ದಾಖಲೆಗಿಂತ 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.

ಅಂದಹಾಗೆ, 2008ರಲ್ಲಿ ಏಷ್ಯಾದ ಕಂಪನಿಗಳಿಗೆ ಐರಿಶ್ ಪದವೀಧರರಿಗೆ ಪರಿಚಯಿಸಲಾದ ಸಾಗರೋತ್ತರ ಪದವೀಧರ ಕಾರ್ಯಕ್ರಮದಲ್ಲಿ, ಅಲನ್ ಟೋಕಿಯೊದಲ್ಲಿನ ಕಂಪನಿಯೊಂದರಲ್ಲಿ ಉದ್ಯೋಗ ಪಡೆದ್ರು. 2014 ರಲ್ಲಿ, ಅಲನ್ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದ್ರು. ಮುಖ್ಯವಾಗಿ ಐರಿಶ್ ಆಹಾರವನ್ನು ಆರಿಸಿಕೊಂಡರು.

ಗಿನ್ನಿಸ್ ವರ್ಲ್ಡ್ ಆಫ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ಜೊತೆ ಮಾತನಾಡಿದ ಅಲನ್, ಮಾರ್ಚ್‌ನಲ್ಲಿ ಟೋಕಿಯೊದಲ್ಲಿ ನಡೆದ ʼಐ ಲವ್ ಐರ್ಲೆಂಡ್ʼ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಅತಿ ಉದ್ದದ ಅಡುಗೆ ತಯಾರಿಕೆ ಮ್ಯಾರಥಾನ್ ದಾಖಲೆಯ ಬಗ್ಗೆ ತಿಳಿದುಕೊಂಡರು.

87 ಗಂಟೆ 45 ನಿಮಿಷಗಳ ಸಮಯದೊಂದಿಗೆ ಭಾರತ ಮೂಲದ ಲತಾ ಟಂಡನ್  ದಾಖಲೆ ಮಾಡಿದ್ದಾರೆ ಎಂದು ಕಂಡುಕೊಂಡರು. ಮೇ ತಿಂಗಳಲ್ಲಿ, ಹಿಲ್ಡಾ ಬಾಸಿ ಅವರು ದಾಖಲೆಯನ್ನು ಮುರಿದಿದ್ದಾರೆ ಎಂಬುದನ್ನು ಸಹ ಅಲನ್ ತಿಳಿದುಕೊಂಡರು. ಅಡುಗೆ ಮ್ಯಾರಥಾನ್‌ನ ಹೊಸ ದಾಖಲೆ ಈಗ 93 ಗಂಟೆ 11 ನಿಮಿಷಗಳು. ಆದರೂ, ಅವರು ಭರವಸೆ ಕಳೆದುಕೊಳ್ಳಲಿಲ್ಲ. ಎಲ್ಲಾ ಅಡೆತಡೆಗಳನ್ನು ಎದುರಿಸಿ, ದಾಖಲೆಗಳನ್ನು ಮುರಿದರು.

ಒಂಬತ್ತು ದಿನಗಳ ನಿರಂತರ ಬೇಕಿಂಗ್ ಮತ್ತು ಅಡುಗೆಯ ನಂತರ, ಅಲನ್ 357 ಕೆಜಿ ಸೋಡಾ ಬ್ರೆಡ್ ಮತ್ತು 32 ಐರಿಶ್ ಪಾಕವಿಧಾನಗಳನ್ನು ಒಳಗೊಂಡಿರುವ ಸುಮಾರು 3,360 ಭಾಗಗಳನ್ನು ಹೊಂದಿರುವ 590 ಕೆಜಿ ಭಕ್ಷ್ಯಗಳನ್ನು ತಯಾರಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...