alex Certify ಕ್ವಾರಂಟೈನ್​ ಅವ್ಯವಸ್ಥೆ ಕಂಡು ಬೆಚ್ಚಿಬಿದ್ದ ಟೆನ್ನಿಸ್​ ಆಟಗಾರರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್​ ಅವ್ಯವಸ್ಥೆ ಕಂಡು ಬೆಚ್ಚಿಬಿದ್ದ ಟೆನ್ನಿಸ್​ ಆಟಗಾರರು…!

ಫೆಬ್ರವರಿ 8ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್​​ ಟೂರ್ನಮೆಂಟ್​ ಸಲುವಾಗಿ ಮೆಲ್ಬೋರ್ನ್​ನಲ್ಲಿ ಆಟಗಾರರನ್ನ ಕ್ವಾರಂಟೈನ್​ ಮಾಡಲಾಗಿದೆ. ಈಗಾಗಲೇ ಓಪನ್​ ಟೂರ್ನಮೆಂಟ್​​ನಲ್ಲಿ ಭಾಗವಹಿಸಬೇಕಿದ್ದ ನಾಲ್ವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಗ್ರ್ಯಾಂಡ್​ ಸ್ಲ್ಯಾಮ್​​ನ ಅರ್ಹತಾ ಪಂದ್ಯ ನಡೆದ ದೋಹಾದಿಂದ 58 ಪ್ರಯಾಣಿಕರನ್ನ ಕರೆದೊಯ್ಯುವ ಮೂರನೇ ವಿಮಾನದಲ್ಲಿದ್ದ ನಾಲ್ವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

72 ಆಟಗಾರರು ಹಾಗೂ ಅವರ ಸಹವರ್ತಿಗಳಿಗೆ ಮೆಲ್ಬೋರ್ನ್​ನ ಹೋಟೆಲ್​​ನಲ್ಲಿ ಕ್ವಾರಂಟೈನ್​​ನಲ್ಲಿ ಇಡಲಾಗಿದೆ. ಆಟಗಾರರಿದ್ದ ವಿಮಾನದಲ್ಲಿ ಸೋಂಕು ವರದಿಯಾದ ಕಾರಣ ತರಬೇತಿಗೆ ಬಿಡಲು ಸಾಧ್ಯವಿಲ್ಲ ಎಂದು ಕ್ವಾರಂಟೈನ್​ ಮಾಡಲಾಗಿದೆ. ಆದರೆ ಹೋಟೆಲ್​ ಅವ್ಯವಸ್ಥೆ ಬಗ್ಗೆ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಟೆಲ್​ನ ಆಹಾರದ ಗುಣಮಟ್ಟವನ್ನ ಕಂಡು ಅನೇಕ ಟೆನ್ನಿಸ್​ ತಾರೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವ ಟೆನ್ನಿಸ್​ನ 15ನೇ ಕ್ರಮಾಂಕದ ಸ್ಪೇನ್​ ಕ್ಯಾರೆನೋ ಬುಸ್ಟಾ ಸಲಾಡ್​, ಸೇಬು ಹಾಗೂ ಜ್ಯೂಸ್​ ಕಪ್​ಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

ಹೋಟೆಲ್​ನಲ್ಲಿ ಆಹಾರದ ವ್ಯವಸ್ಥೆ ಸರಿಯಿಲ್ಲದ ಕಾರಣ ಫ್ರಾನ್ಸ್​ನ ವಿಶ್ವದ ನಂ 28ರ ಆಟಗಾರ ಪೈರ್​ ಮೆಕ್​ ಡೊನಾಲ್ಡ್​​ನಿಂದ ತಿನಿಸನ್ನ ತರಿಸಿಕೊಂಡಿದ್ದಾರೆ.

ಇನ್ನು ಮಹಿಳಾ ಟೆನ್ನಿಸ್​ನ 71ನೇ ಕ್ರಮಾಂಕದ ಸೊರೊನಾ ಕಸ್ರ್ಟಿಯಾ, ನಿಜಕ್ಕೂ ಈ ಎಲ್ಲಾ ನಿಯಮಗಳಿವೆ ಎಂದು ಮೊದಲೇ ತಿಳಿದಿದ್ದರೆ ನಾನು ಆಸ್ಟ್ರೇಲಿಯಾಗೆ ಬರುತ್ತಲೇ ಇರಲಿಲ್ಲ, ಮನೆಯಲ್ಲೇ ಇರ್ತಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...