alex Certify ತಾಯಿ, ಸಹೋದರಿ ಕಳೆದುಕೊಂಡ ವೇದಾ ಕೃಷ್ಣಮೂರ್ತಿಗೆ ಒಂದೇ ಒಂದು ಕರೆ ಮಾಡದ ಬಿಸಿಸಿಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ, ಸಹೋದರಿ ಕಳೆದುಕೊಂಡ ವೇದಾ ಕೃಷ್ಣಮೂರ್ತಿಗೆ ಒಂದೇ ಒಂದು ಕರೆ ಮಾಡದ ಬಿಸಿಸಿಐ

ಭಾರತೀಯ ಮಹಿಳಾ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ದುಃಖದಲ್ಲಿದ್ದಾರೆ. ಕೊರೊನಾ ಸೋಂಕಿಗೆ ಅವರ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ವೇದಾ ದುಃಖದಲ್ಲಿದ್ದು, ಬಿಸಿಸಿಐ ಅವರನ್ನು ಸಂಪರ್ಕಿಸಲಿಲ್ಲ.

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಾಲೇಕರ್ ಬಿಸಿಸಿಐ ಕ್ರಮವನ್ನು ವಿರೋಧಿಸಿದ್ದಾರೆ. ವೇದಾ, ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದರೂ ಬಿಸಿಸಿಐ ಅವರನ್ನು ಸಂಪರ್ಕಿಸಿಲ್ಲ. ಹಾಗೆ ಮುಂಬರುವ ಇಂಗ್ಲೆಂಡ್‌ ಪ್ರವಾಸಕ್ಕೆ ವೇದಾರನ್ನು ಆಯ್ಕೆ ಮಾಡದಿರುವುದು ಸರಿಯಲ್ಲವೆಂದಿದ್ದಾರೆ.

ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ  ಟೆಸ್ಟ್ ಮತ್ತು ಏಕದಿನ ಪಂದ್ಯ ನಡೆಯಲಿದೆ. ಈ ತಂಡದಲ್ಲಿ ವೇದಾ ಕೃಷ್ಣಮೂರ್ತಿ ಸ್ಥಾನ ಪಡೆದಿಲ್ಲ. ಈ ಬಗ್ಗೆ ಲಿಸಾ ಸ್ಥಾಲೇಕರ್ ಟ್ವಿಟ್ ಮಾಡಿದ್ದಾರೆ. ಮುಂಬರುವ ಸರಣಿಗೆ ವೇದಾರನ್ನು ಆಯ್ಕೆ ಮಾಡದಿರುವುದು ಬಿಸಿಸಿಐ ದೃಷ್ಟಿಕೋನದಿಂದ ಸೂಕ್ತವಾಗಿರಬಹುದು. ಆದರೆ ದುಃಖದಲ್ಲಿರುವ ವೇದಾರನ್ನು ಬಿಸಿಸಿಐ ಸಂಪರ್ಕಿಸದಿರುವುದ ಬೇಸರ ತಂದಿದೆ ಎಂದಿದ್ದಾರೆ. ಉತ್ತಮ ಸಂಘಟನೆ ಆಟಗಾರರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು. ಆದ್ರೆ ಬಿಸಿಸಿಐ ಮಾಡಿರುವ ಕೆಲಸ ನಿರಾಶಾದಾಯಕವಾಗಿದೆ ಎಂದು ಲಿಸಾ ಟ್ವಿಟ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ವೇದಾ ಸಹೋದರಿ ವತ್ಸಲಾ ಶಿವಕುಮಾರ್ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಎರಡು ವಾರಗಳ ಮೊದಲು, ಅವರ ತಾಯಿ ವೈರಸ್‌ಗೆ ಬಲಿಯಾಗಿದ್ದಾರೆ.  ಬೆಂಗಳೂರಿನ 28 ವರ್ಷದ ವೇದಾ ಕೃಷ್ಣಮೂರ್ತಿ ಭಾರತಕ್ಕಾಗಿ 48 ಏಕದಿನ ಮತ್ತು 76 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...