alex Certify BIG NEWS: ಫುಟ್ಬಾಲ್​ ದಂತಕತೆ ಪೀಲೆ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ಮೆಸ್ಸಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫುಟ್ಬಾಲ್​ ದಂತಕತೆ ಪೀಲೆ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ಮೆಸ್ಸಿ…!

ಫುಟ್​ಬಾಲ್​ ದಂತಕತೆ ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನ ಬಾರ್ಸಿಲೋನಾ ಫುಟ್​ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ ಮುರಿದಿದ್ದಾರೆ.

ಮಂಗಳವಾರ ವಲ್ಲಾಡೋಲಿಡ್​ನಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 3-0 ಗೋಲುಗಳ ಅಂತರದಲ್ಲಿ ಗೆಲುವನ್ನ ಸಾಧಿಸಿತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೆಸ್ಸಿ 644ನೇ ಗೋಲು ಗಳಿಸುವ ಮೂಲಕ ಪೀಲೆ ದಾಖಲೆಯನ್ನ ಮುರಿದಿದ್ದಾರೆ.‌

ಸ್ಯಾಂಟೋಸ್​ ತಂಡದ ಆಟಗಾರನಾಗಿದ್ದ ಪೀಲೆ 643 ಗೋಲುಗಳನ್ನ ಗಳಿಸಿ 1974ರಲ್ಲಿ ನಿವೃತ್ತಿ ಪಡೆದಿದ್ದರು. 2004ರಂದು ಫುಟ್​​ಬಾಲ್​ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಮೆಸ್ಸಿ ಈವರೆಗೆ ಒಟ್ಟು 644 ಗೋಲುಗಳನ್ನ ಗಳಿಸಿದ್ದಾರೆ.

ಇನ್ನು ಪೀಲೆ ದಾಖಲೆ ಮುರಿದ ಬಳಿಕ ಟ್ವೀಟ್​ ಮಾಡಿದ ಮೆಸ್ಸಿ, ನಾನು ಫುಟ್​ಬಾಲ್​ ಜಗತ್ತಿಗೆ ಕಾಲಿಟ್ಟಾಗ ಪೀಲೆ ದಾಖಲೆ ಮುರಿಯುತ್ತೇನೆ ಎಂದು ಊಹೆ ಮಾಡಿರಲಿಲ್ಲ. ನನ್ನ ಈ ಸಾಧನೆಯ ಹಾದಿಯಲ್ಲಿ ಜೊತೆಗಿದ್ದ ನನ್ನ ತಂಡದ ಸದಸ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

— Leo Messi ? (@WeAreMessi) December 22, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...