alex Certify ಫ್ಲೈಯಿಂಗ್​ ಸಿಖ್​ ಖ್ಯಾತಿಯ ಮಿಲ್ಖಾ ಸಿಂಗ್​ರಿಗೆ ಕೊರೊನಾ ಪಾಸಿಟಿವ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಯಿಂಗ್​ ಸಿಖ್​ ಖ್ಯಾತಿಯ ಮಿಲ್ಖಾ ಸಿಂಗ್​ರಿಗೆ ಕೊರೊನಾ ಪಾಸಿಟಿವ್..​..!

ಫ್ಲೈಯಿಂಗ್​ ಸಿಖ್​ ಎಂದೇ ಖ್ಯಾತಿ ಗಳಿಸಿರುವ ಭಾರತದ ದಂತಕತೆ ಮಿಲ್ಖಾ ಸಿಂಗ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮಿಲ್ಖಾ ಸಿಂಗ್​ ಪುತ್ರ ಜೀವ್​ ಮಿಲ್ಖಾ ಅಧಿಕೃತ ಮಾಹಿತಿ ನೀಡಿದ್ದಾರೆ. ತಮ್ಮ ತಂದೆ ಚಂಡೀಗಢದ ನಿವಾಸದಲ್ಲಿ ಹೋಂ ಕ್ವಾರಂಟೈನ್​ ಆಗಿದ್ದಾರೆ ಎಂದು ಮಿಲ್ಖಾ ಮಾಹಿತಿ ನೀಡಿದ್ದಾರೆ.

ಮಿಲ್ಖಾ ಸಿಂಗ್​​ರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಕಳೆದ ರಾತ್ರಿಯಿಂದ ಅವರು ಜ್ವರದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಿಲ್ಖಾ ಸಿಂಗ್​ರ ಪತ್ನಿ ನಿರ್ಮಲ್​ ಮಿಲ್ಖಾ ಸಿಂಗ್​ ನೀಡಿರುವ ಮಾಹಿತಿಯ ಪ್ರಕಾರ, ಇವರ ಮನೆಯಲ್ಲಿ ಕಳೆದ 50 ವರ್ಷದಿಂದ ಕೆಲಸ ಮಾಡುತ್ತಿದ್ದ ಬಾಣಸಿಗರಿಗೆ ಕೊರೊನಾ ಬಂದಿದ್ದು ಅದರಿಂದ ಸೋಂಕು ವ್ಯಾಪಿಸಿದೆ ಎಂದು ಹೇಳಿದ್ದಾರೆ.

91 ವರ್ಷ ವಯಸ್ಸಿನ ಮಿಲ್ಕಾ ಸಿಂಗ್​​ ಏಷಿಯನ್​ ಗೇಮ್ಸ್ ಹಾಗೂ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ 400 ಮೀಟರ್​ ಓಟದಲ್ಲಿ ಚಿನ್ನದ ಪದಕ ಬಾಚಿದ ಏಕೈಕ ಭಾರತೀಯ ಆಟಗಾರನಾಗಿದ್ದಾರೆ.

1958 ಹಾಗೂ 1962ರ ಏಷಿಯನ್​ ಗೇಮ್ಸ್​ನಲ್ಲೂ ಮಿಲ್ಖಾ ಚಿನ್ನದ ಪದಕ ಸಂಪಾದಿಸಿದ್ದಾರೆ. 1956ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಸಮ್ಮರ್​ ಒಲಿಂಪಿಕ್ಸ್, 1960ರಲ್ಲಿ ರೋಮನ್​ನಲ್ಲಿ ನಡೆದ ಸಮ್ಮರ್​ ಒಲಿಂಪಿಕ್ಸ್ ಹಾಗೂ 1964ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು.

ಮಿಲ್ಖಾ ಸಿಂಗ್​ರ ಸಾಧನೆಯನ್ನ ಮೆಚ್ಚಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...