ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಗಳಿಸಿರುವ ಭಾರತದ ದಂತಕತೆ ಮಿಲ್ಖಾ ಸಿಂಗ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮಿಲ್ಖಾ ಸಿಂಗ್ ಪುತ್ರ ಜೀವ್ ಮಿಲ್ಖಾ ಅಧಿಕೃತ ಮಾಹಿತಿ ನೀಡಿದ್ದಾರೆ. ತಮ್ಮ ತಂದೆ ಚಂಡೀಗಢದ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ ಎಂದು ಮಿಲ್ಖಾ ಮಾಹಿತಿ ನೀಡಿದ್ದಾರೆ.
ಮಿಲ್ಖಾ ಸಿಂಗ್ರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಕಳೆದ ರಾತ್ರಿಯಿಂದ ಅವರು ಜ್ವರದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಿಲ್ಖಾ ಸಿಂಗ್ರ ಪತ್ನಿ ನಿರ್ಮಲ್ ಮಿಲ್ಖಾ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ಇವರ ಮನೆಯಲ್ಲಿ ಕಳೆದ 50 ವರ್ಷದಿಂದ ಕೆಲಸ ಮಾಡುತ್ತಿದ್ದ ಬಾಣಸಿಗರಿಗೆ ಕೊರೊನಾ ಬಂದಿದ್ದು ಅದರಿಂದ ಸೋಂಕು ವ್ಯಾಪಿಸಿದೆ ಎಂದು ಹೇಳಿದ್ದಾರೆ.
91 ವರ್ಷ ವಯಸ್ಸಿನ ಮಿಲ್ಕಾ ಸಿಂಗ್ ಏಷಿಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಬಾಚಿದ ಏಕೈಕ ಭಾರತೀಯ ಆಟಗಾರನಾಗಿದ್ದಾರೆ.
1958 ಹಾಗೂ 1962ರ ಏಷಿಯನ್ ಗೇಮ್ಸ್ನಲ್ಲೂ ಮಿಲ್ಖಾ ಚಿನ್ನದ ಪದಕ ಸಂಪಾದಿಸಿದ್ದಾರೆ. 1956ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್, 1960ರಲ್ಲಿ ರೋಮನ್ನಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್ ಹಾಗೂ 1964ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು.
ಮಿಲ್ಖಾ ಸಿಂಗ್ರ ಸಾಧನೆಯನ್ನ ಮೆಚ್ಚಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.