ಕೊಮೊರೊಸ್ ವಿರುದ್ಧದ ಆಫ್ರಿಕನ್ ಕಪ್ ಆಫ್ ನೇಷನ್ಸ್ ಅರ್ಹತಾ ಪಂದ್ಯದ ವೇಳೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣ ಕೀನ್ಯಾಗೆ 14,67,586.83 ರೂಪಾಯಿಗಳ ದಂಡವನ್ನ ವಿಧಿಸಲಾಗಿದೆ. ಹಾಗೂ ಇಬ್ಬರು ಫುಟ್ಬಾಲ್ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನವೆಂಬರ್ನಲ್ಲಿ ಕೊಮೊರೊಸ್ ರಾಜಧಾನಿ ಮೊರೊನಿಯಲ್ಲಿ ನಡೆಯುವ ಪಂದ್ಯಕ್ಕೂ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದೆ ಎಂದು ಕಾನ್ಫಡರೇಷನ್ ಆಫ್ ಆಫ್ರಿಕನ್ ಫುಟ್ಬಾಲ್ ಹೇಳಿದೆ.
ದೀರ್ಘ ವಿಳಂಬದಿಂದಾಗಿ ಕಿಕ್ ಆಫ್ ಮಾಡಲು ಕೆಲವೇ ನಿಮಿಷಗಳ ಮೊದಲು ಪರೀಕ್ಷಾ ಫಲಿತಾಂಶಗಳು ಬಂದವು ಎಂದು ಸಿಎಎಫ್ ಹೇಳಿಕೆಯಲ್ಲಿ ತಿಳಿಸಿದೆ, ನಾಲ್ಕು ಆಟಗಾರರ ಪರೀಕ್ಷೆ ಧನಾತ್ಮಕವಾಗಿದೆ.
ಆದರೆ ಈ ಫಲಿತಾಂಶವನ್ನ ನಿರಾಕರಿಸಿದ ಫುಟ್ಬಾಲ್ ಕೀನ್ಯಾ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಬ್ಯಾರಿ ಒಟೊಯೆನೊ ಹಾಗೂ ಕೀನ್ಯಾ ತಂಡದ ವ್ಯವಸ್ಥಾಪಕ ರೋನಿ ಒಯಾಂಡೋ ಅವುಗಳನ್ನ ಹರಿದು ಹಾಕಿದ್ದರು ಎನ್ನಲಾಗಿದೆ.