alex Certify ಕೊರೊನಾ ನಿಯಮಾವಳಿ ಉಲ್ಲಂಘಿಸಿದ ಕೀನ್ಯಾ ಫುಟ್​ಬಾಲ್​ ತಂಡಕ್ಕೆ 14 ಲಕ್ಷ ರೂ. ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಮಾವಳಿ ಉಲ್ಲಂಘಿಸಿದ ಕೀನ್ಯಾ ಫುಟ್​ಬಾಲ್​ ತಂಡಕ್ಕೆ 14 ಲಕ್ಷ ರೂ. ದಂಡ..!

ಕೊಮೊರೊಸ್​ ವಿರುದ್ಧದ ಆಫ್ರಿಕನ್​​ ಕಪ್​ ಆಫ್​ ನೇಷನ್ಸ್​ ಅರ್ಹತಾ ಪಂದ್ಯದ ವೇಳೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಕಾರಣ ಕೀನ್ಯಾಗೆ 14,67,586.83 ರೂಪಾಯಿಗಳ ದಂಡವನ್ನ ವಿಧಿಸಲಾಗಿದೆ. ಹಾಗೂ ಇಬ್ಬರು ಫುಟ್​​​ಬಾಲ್​ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನವೆಂಬರ್​​ನಲ್ಲಿ ಕೊಮೊರೊಸ್​ ರಾಜಧಾನಿ ಮೊರೊನಿಯಲ್ಲಿ ನಡೆಯುವ ಪಂದ್ಯಕ್ಕೂ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದೆ ಎಂದು ಕಾನ್ಫಡರೇಷನ್​​ ಆಫ್​ ಆಫ್ರಿಕನ್​​ ಫುಟ್​ಬಾಲ್​​ ಹೇಳಿದೆ.

ದೀರ್ಘ ವಿಳಂಬದಿಂದಾಗಿ ಕಿಕ್ ಆಫ್ ಮಾಡಲು ಕೆಲವೇ ನಿಮಿಷಗಳ ಮೊದಲು ಪರೀಕ್ಷಾ ಫಲಿತಾಂಶಗಳು ಬಂದವು ಎಂದು ಸಿಎಎಫ್ ಹೇಳಿಕೆಯಲ್ಲಿ ತಿಳಿಸಿದೆ, ನಾಲ್ಕು ಆಟಗಾರರ ಪರೀಕ್ಷೆ ಧನಾತ್ಮಕವಾಗಿದೆ.

ಆದರೆ ಈ ಫಲಿತಾಂಶವನ್ನ ನಿರಾಕರಿಸಿದ ಫುಟ್ಬಾಲ್​​ ಕೀನ್ಯಾ ಫೆಡರೇಷನ್​ ಪ್ರಧಾನ ಕಾರ್ಯದರ್ಶಿ ಬ್ಯಾರಿ ಒಟೊಯೆನೊ ಹಾಗೂ ಕೀನ್ಯಾ ತಂಡದ ವ್ಯವಸ್ಥಾಪಕ ರೋನಿ ಒಯಾಂಡೋ ಅವುಗಳನ್ನ ಹರಿದು ಹಾಕಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...