alex Certify IPL: ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL: ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ಇಲ್ಲಿದೆ ಮಾಹಿತಿ

ಮುಂಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಹಬ್ಬವೆಂದೇ ಹೇಳಲಾಗುವ ಐಪಿಎಲ್ ಶೀಘ್ರದಲ್ಲೇ ಶುರುವಾಗಲಿದೆ. ಐಪಿಎಲ್ ಕುರಿತಾಗಿ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಇದೇ ವೇಳೆ ಜಿಯೋ ರಿಚಾರ್ಜ್ ನಿಂದ ಉಚಿತವಾಗಿ ಐಪಿಎಲ್ ವೀಕ್ಷಿಸಬಹುದಾಗಿದೆ. ಹಾಟ್ ಸ್ಟಾರ್ ಮೊಬೈಲ್ ಆಪ್ ನಲ್ಲಿ ಐಪಿಎಲ್ ಅನ್ನು ನೇರವಾಗಿ ವೀಕ್ಷಿಸಲು ಸಾಧ್ಯವಿದೆ.

ಜಿಯೋ ಆಯ್ದ ಯೋಜನೆಗಳ ಪ್ರಕಾರ ರೀಚಾರ್ಜ್ ಮಾಡಿಸಿದರೆ ಹಾಟ್ ಸ್ಟಾರ್ ಚಂದಾದಾರಿಕೆ ಉಚಿತವಾಗಿ ಸಿಗಲಿದ್ದು, ಈ ಮೂಲಕ ಉಚಿತವಾಗಿ ಐಪಿಎಲ್ ವೀಕ್ಷಿಸಬಹುದಾಗಿದೆ. ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ರೀಚಾರ್ಜ್ ಮೂಲಕವೂ ಉಚಿತವಾಗಿ ಐಪಿಎಲ್ ವೀಕ್ಷಿಸುವ ಅವಕಾಶ ಪಡೆಯಬಹುದು.

2599 ರೂಪಾಯಿ ಜಿಯೋ ವಾರ್ಷಿಕ ಚಂದಾದಾರರಾದಲ್ಲಿ 12 ತಿಂಗಳಿಗೆ 740 ಜಿಬಿ ಡೇಟಾ ಸಿಗಲಿದೆ. ಡಿಸ್ನಿ ಹಾಗೂ ಹಾಟ್ ಸ್ಟಾರ್ ವಾರ್ಷಿಕ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು. ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ 840 ರೂಪಾಯಿಗಿಂತ ಜಾಸ್ತಿ ರಿಚಾರ್ಜ್ ಮಾಡಿಸುವ ಯೋಜನೆಗಳಿದ್ದು, ಹಾಟ್ ಸ್ಟಾರ್ ಹಾಗೂ ಡಿಸ್ನಿ ವಾರ್ಷಿಕ ಚಂದಾದಾರಿಕೆ ಉಚಿತವಾಗಿ ಸಿಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...