alex Certify ಬಿಸಿಸಿಐ ಸಂಭಾವನೆ ಪಟ್ಟಿಯಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಜಸ್ಪ್ರೀತ್​ ಬೂಮ್ರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಸಿಐ ಸಂಭಾವನೆ ಪಟ್ಟಿಯಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಜಸ್ಪ್ರೀತ್​ ಬೂಮ್ರಾ..!

2020ನೇ ಇಸ್ವಿಯಲ್ಲಿ ಬಿಸಿಸಿಐನಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ವೇಗಿ ಜಸ್ಪ್ರೀತ್​ ಬೂಮ್ರಾ ನಾಯಕ ವಿರಾಟ್​ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.

ಬಿಸಿಸಿಐನಿಂದ ಈ ವರ್ಷ ಜಸ್ಪ್ರೀತ್​ ಬೂಮ್ರಾ 1.38 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಬಿಸಿಸಿಐ ಸಂಭಾವನೆ ಪಟ್ಟಿಯಲ್ಲಿ ಬೂಮ್ರಾ ಟೀಂ ಇಂಡಿಯಾ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾರನ್ನೇ ಹಿಂದಿಕ್ಕಿದ್ದಾರೆ.

ಇನ್ನೊಂದು ಆಶ್ಚರ್ಯಕರ ವಿಚಾರ ಅಂದರೆ ಬಿಸಿಸಿಐನಿಂದ ಈ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್​ 5 ಟೀಂ ಇಂಡಿಯಾ ಆಟಗಾರರ ಪಟ್ಟಿಯಿಂದ ರೋಹಿತ್​ ಶರ್ಮಾ ಹೊರಬಿದ್ದಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 2020ರ ಬಿಸಿಸಿಐನ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಇರಬಹುದಿತ್ತು. ಆದರೆ ಪಿತೃತ್ವ ರಜೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಎರಡನೇ ಪಂದ್ಯದಿಂದ ಕೊಹ್ಲಿ ಭಾರತಕ್ಕೆ ಹಿಂದಿರುಗಿರೋದ್ರಿಂದ ಸಂಭಾವನೆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಬೂಮ್ರಾ ಬಿಸಿಸಿಐನ ಎ ಪ್ಲಸ್​ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೂಮ್ರಾ ಈ ವರ್ಷ ಟೀಂ ಇಂಡಿಯಾ ಪರ 4 ಟೆಸ್ಟ್ ( ಬಾಕ್ಸಿಂಗ್​ ಡೇ ಟೆಸ್ಟ್​ನ್ನೂ ಸೇರಿಸಿ) , 9 ಏಕದಿನ ಪಂದ್ಯ ಹಾಗೂ 8 ಟಿ 20 ಪಂದ್ಯಗಳನ್ನ ಆಡಿದ್ದಾರೆ. ಇನ್ನು ಬಿಸಿಸಿಐನಿಂದ 96 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಮೂಲಕ ರವೀಂದ್ರ ಜಾಡೇಜಾ ಎ ಪ್ಲಸ್​ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...