alex Certify ರೋಹಿತ್​ ಶರ್ಮಾಗೆ ಐಪಿಎಲ್​ ಮುಖ್ಯವೋ….ಟೀಂ ಇಂಡಿಯಾ ಮುಖ್ಯವೋ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್​ ಶರ್ಮಾಗೆ ಐಪಿಎಲ್​ ಮುಖ್ಯವೋ….ಟೀಂ ಇಂಡಿಯಾ ಮುಖ್ಯವೋ…?

ಗಾಯದಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್​ ಶರ್ಮಾ ಮಂಗಳವಾರ ನಡೆದ ಸನ್​ ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಅಚ್ಚರಿಯ ಕಮ್​ ಬ್ಯಾಕ್​ ಮಾಡಿದ್ದರು.

ಆದರೆ ಅದೇ ದಿನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಓಪನರ್​ ರೋಹಿತ್​ ಶರ್ಮಾ ಗಾಯಗೊಂಡಿರೋದ್ರಿಂದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ದರು. ಇವರೆಡು ಘಟನೆಗಳು ಕ್ರಿಕೆಟ್​ ಅಭಿಮಾನಿಗಳಿಗೆ ರೋಹಿತ್​ ಶರ್ಮಾ ಫಿಟ್​ನೆಸ್​ ಕುರಿತಂತೆ ಗೊಂದಲ ಉಂಟುಮಾಡಿತ್ತು.

ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್​ ವೆಂಗಸರ್ಕರ್​, ಮಂಗಳವಾರ ನಡೆದ ಪಂದ್ಯದಲ್ಲಿ ರೋಹಿತ್​ ಶರ್ಮಾ ಭಾಗಿಯಾಗಿದ್ದನ್ನ ಪ್ರಶ್ನೆ ಮಾಡಿದ್ದಾರೆ, ದೇಶವನ್ನ ಪ್ರತಿನಿಧಿಸೋದಕ್ಕಿಂತ ರೋಹಿತ್​ ಶರ್ಮಾಗೆ ಐಪಿಎಲ್​ ಲೀಗ್​​ ಹೆಚ್ಚು ಮುಖ್ಯವೇ ಅಂತಾ ಪ್ರಶ್ನೆ ಮಾಡಿದ್ದಾರೆ. ದೇಶವನ್ನ ಪ್ರತಿನಿಧಿಸುವುದಕ್ಕಿಂತ ರೋಹಿತ್​ಗೆ ಲೀಗ್​ ಟೀಂನ್ನ ಪ್ರತಿನಿಧಿಸೋದು ಮುಖ್ಯವಾ..? ಅಥವಾ ಬಿಸಿಸಿಐ ರೋಹಿತ್​ ಶರ್ಮಾರ ಗಾಯವನ್ನ ಕಂಡು ಹಿಡಿಯೋದ್ರಲ್ಲಿ ವಿಫಲವಾಗಿದ್ಯಾ ಅಂತಾ ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...