alex Certify ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ RCB: ಹೊಸ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ RCB: ಹೊಸ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ

ಚೆನ್ನೈ: ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿದ್ದ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಇಂದು ಹ್ಯಾಟ್ರಿಕ್ ಜಯದ ಕನಸಿನಲ್ಲಿದೆ.

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಎದುರು ಆರ್ಸಿಬಿ ಸೆಣೆಸಾಡಲಿದೆ. ಉಭಯ ತಂಡಗಳು 26 ಸಲ ಮುಖಾಮುಖಿಯಾಗಿದ್ದು, ಕೊಲ್ಕತ್ತಾ ತಂಡ 14 ಹಾಗೂ ಬೆಂಗಳೂರು ತಂಡ 12 ಸಲ ಜಯಗಳಿಸಿವೆ. ಇಂದು ಮಧ್ಯಾಹ್ನ 3.30 ಕ್ಕೆ ಪಂದ್ಯ ಆರಂಭವಾಗಲಿದೆ.

ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನು 56 ರನ್ ಗಳಿಸಿದರೆ ಐಪಿಎಲ್ ನಲ್ಲಿ 6000 ರನ್ ಗಳಿಸಿದಂತಾಗುತ್ತದೆ. ಈ ಮೂಲಕ ಅವರು ಹೊಸ ದಾಖಲೆ ನಿರ್ಮಿಸಲಿದ್ದಾರೆ. 194 ಐಪಿಎಲ್ ಪಂದ್ಯಗಳನ್ನಾಡಿರುವ ಕೊಹ್ಲಿ 186 ಇನಿಂಗ್ಸ್ ಗಳಲ್ಲಿ 5944 ರನ್ ಗಳಿಸಿದ್ದು 5 ಶತಕ, 39 ಅರ್ಧಶತಕ ಸಿಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...