alex Certify 3 ನೇ ಪಂದ್ಯದಲ್ಲಿ 119 ರನ್ ಗಳಿಂದ ವಿಂಡೀಸ್ ಮಣಿಸಿದ ಭಾರತ: ಸರಣಿ ವೈಟ್ ವಾಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ನೇ ಪಂದ್ಯದಲ್ಲಿ 119 ರನ್ ಗಳಿಂದ ವಿಂಡೀಸ್ ಮಣಿಸಿದ ಭಾರತ: ಸರಣಿ ವೈಟ್ ವಾಶ್

ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು(ಡಕ್ವರ್ಥ್ ನಿಯಮದನ್ವಯ) 119 ರನ್‌ ಗಳಿಂದ ಸೋಲಿಸಿದ ಟೀಂ ಇಂಡಿಯಾ ಆತಿಥೇಯರ ವಿರುದ್ಧದ ಸರಣಿಯನ್ನು 3-0 ವೈಟ್‌ ವಾಶ್ ಮಾಡಿದೆ.

ಇದರೊಂದಿಗೆ ಶಿಖರ್ ಧವನ್ ನಾಯಕತ್ವದಲ್ಲಿ ಭಾರತದ 2 ನೇ ODI ಸರಣಿ ವಿಜಯ ದಾಖಲಿಸಿದೆ. 35 ಓವರ್‌ಗಳಲ್ಲಿ 257 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ 26 ಓವರ್‌ ಗಳಲ್ಲಿ 137 ರನ್‌ಗಳಿಗೆ ಆಲ್ ಔಟ್ ಆಯಿ ಸೋಲು ಕಂಡಿದೆ. ಯುಜುವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರು. ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.

ಶಿಖರ್ ಧವನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಂತರ ಮಳೆಯಿಂದಾಗಿ ಎರಡು ಬಾರಿ ಪಂದ್ಯ ಸ್ಥಗಿತಗೊಂಡಿತ್ತು, ಶಿಖರ ಧವನ್ 58, ಶುಭಮನ್ ಗಿಲ್ 98, ಶ್ರೇಯಸ್ ಅಯ್ಯರ್ 44, ಸೂರ್ಯ ಕುಮಾರ್ ಯಾದವ್ 8, ಸಂಜು ಸ್ಯಾಮ್ಸನ್ 6 ರನ್ ಗಳಿಸಿದರು. ಭಾರತ 36 ಓವರ್ ಗಳಲ್ಲಿ 3 ವಿಕೆಟ್ ಗೆ 225 ರನ್ ಗಳಿಸಿತು. ವಿಂಡೀಸ್ ಪರವಾಗಿ ಹೇಡನ್ ವಾಲ್ಷ್ 2, ಅಕಿಲ್ ಹುಸೇನ್ 1 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 26 ಓವರ್ ಗಳಲ್ಲಿ 137 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಶೈ ಹೋಪ್ 22, ಬ್ರೆಂಡನ್ ಕಿಂಗ್ 42, ನಿಕೋಲಸ್ ಪೂರನ್ 42 ಹೊರತುಪಡಿಸಿ ಉಳಿದವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...