alex Certify ಶ್ರೀಲಂಕಾ ಅಥ್ಲೆಟಿಕ್ಸ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ 2ನೇ ದಿನ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾ ಅಥ್ಲೆಟಿಕ್ಸ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ 2ನೇ ದಿನ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕ

ನಿನ್ನೆ ಶ್ರೀಲಂಕಾ ಅಥ್ಲೆಟಿಕ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತದ ಅಥ್ಲೀಟ್‌ಗಳು ಮೂರು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.

ಮಹಿಳೆಯರ 3000 ಮೀಟರ್ ಸ್ಟೀಪಲ್‌ ಚೇಸ್‌ ನಲ್ಲಿ ಪ್ರೀತಿ ಲಾಂಬಾ ಚಿನ್ನದ ಪದಕ ಗೆದ್ದರೆ, ಬಾಲ್ ಕಿಶನ್ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆದರು. ಸೋನಿಯಾ ಬೈಶ್ಯಾ ಕೂಡ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮತ್ತೊಂದೆಡೆ ಇದೇ ಸ್ಪರ್ಧೆಯಲ್ಲಿ ಜಿಸ್ನಾ ಮ್ಯಾಥ್ಯೂ ದ್ವಿತೀಯ ಸ್ಥಾನ ಪಡೆದರು. ಭಾರತದ ಅಥ್ಲೀಟ್‌ಗಳು ಎರಡು ಚಿನ್ನ ಮತ್ತು ಎರಡು ಪದಕಗಳನ್ನು ಗೆದ್ದಿದ್ದಾರೆ.

ಸ್ಪರ್ಧೆಯ ಆರಂಭಿಕ ದಿನದಂದು. ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಪ್ರೀತಿ 10:13.06 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನ ಪಡೆದರು. 27ರ ಹರೆಯದ ಅವರು ನಾಲ್ಕು ಮಹಿಳೆಯರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು. ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಬಾಲ್ ಕಿಶನ್ 8:51.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ 400 ಮೀ ಓಟದ ಫೈನಲ್‌ನಲ್ಲಿ ಸೋನಿಯಾ ಬೈಶ್ಯಾ ಅವರು ಮಾಜಿ ಏಷ್ಯನ್ ಚಾಂಪಿಯನ್ ಜಿಸ್ನಾ ಮ್ಯಾಥ್ಯೂ ಅವರನ್ನು ಸೋಲಿಸಿ ವೇದಿಕೆಯಲ್ಲಿ ಅಗ್ರಸ್ಥಾನ ಪಡೆದರು. ಸೋನಿಯಾ ಬೈಶ್ಯಾ 53.46 ಸೆ.ಗಳಲ್ಲಿ ಗುರಿ ತಲುಪಿದರೆ, ಜಿಸ್ನಾ ಮ್ಯಾಥ್ಯೂ 53.75 ಸೆ.ಗಳಲ್ಲಿ ಗುರಿ ಮುಟ್ಟಿದರು. 101ನೇ ಶ್ರೀಲಂಕಾ ಅಥ್ಲೆಟಿಕ್ಸ್‌ನಲ್ಲಿ ಭಾರತೀಯರಲ್ಲದೆ ಮಾಲ್ಡೀವ್ಸ್‌ನ ಅಥ್ಲೀಟ್‌ಗಳೂ ಭಾಗವಹಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...