alex Certify ಟಿ20 ಸರಣಿಯಿಂದ ಹೊರಗುಳಿದ KL ರಾಹುಲ್, ರಿಷಬ್ ಪಂತ್ ಗೆ ಉಪನಾಯಕನಾಗಿ ಬಡ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ಸರಣಿಯಿಂದ ಹೊರಗುಳಿದ KL ರಾಹುಲ್, ರಿಷಬ್ ಪಂತ್ ಗೆ ಉಪನಾಯಕನಾಗಿ ಬಡ್ತಿ

ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ ನಂತರ, ಭಾರತ ವೈಟ್ ಬಾಲ್ ತಂಡದ ಉಪನಾಯಕ ಕೆ.ಎಲ್. ರಾಹುಲ್ ಗಾಯಗೊಂಡು ಹೊರಗುಳಿದಿದ್ದಾರೆ. ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಗೆ ರಿಷಬ್ ಪಂತ್ ಅವರನ್ನು ಉಪನಾಯನನ್ನಾಗಿ ಆಯ್ಕೆ ಮಾಡಿದೆ.

ತನ್ನ ಸಹೋದರಿಯ ಮದುವೆಗಾಗಿ ಸರಣಿಯ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿದ್ದ ಕೆ.ಎಲ್. ರಾಹುಲ್ ತಂಡವನ್ನು ಸೇರಿಕೊಂಡು ಎರಡನೇ ಏಕದಿನದಲ್ಲಿ ಭಾರತ ತಂಡದ ಪರ ನಂ.4 ರಲ್ಲಿ ಬ್ಯಾಟಿಂಗ್ ಮಾಡಿದರು. ಆದಾಗ್ಯೂ, ಭಾರತೀಯ ಸೀಮಿತ ಓವರ್‌ ಗಳ ತಂಡದ ಉಪನಾಯಕ ಗಾಯದಿಂದ ಬಳಲುತ್ತಿದ್ದರು. ಮತ್ತು ಮೂರನೇ ಮತ್ತು ಅಂತಿಮ ODI ಮತ್ತು ನಂತರದ T20I ಸರಣಿಯಿಂದ ಹೊರಗುಳಿದಿದ್ದಾರೆ ಎನ್ನುವುದು ತಂಡ ಪ್ರಕಟಿಸಿದಾಗ ಬಹಿರಮಗವಾಯಿತು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಫೆಬ್ರವರಿ 14, 2022 ರಂದು ತನ್ನ ಇತ್ತೀಚಿನ ಪ್ರಕಟಣೆಯಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಮೂರು T20I ಗಳಿಗೆ ರಿಷಬ್ ಪಂತ್ ಅವರನ್ನು ಭಾರತೀಯ T20I ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. ಫೆಬ್ರವರಿ 16, 18 ಮತ್ತು 20 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ನಲ್ಲಿ ಪಂದ್ಯಗಳು ನಡೆಯಲಿದೆ.

ವಾಷಿಂಗ್ಟನ್ ಸುಂದರ್ ಹೊರಕ್ಕೆ, ಕುಲದೀಪ್ ಯಾದವ್ ಸ್ಥಾನಕ್ಕೆ ಆಯ್ಕೆ

ಮತ್ತೊಂದೆಡೆ, ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ) ಅಧಿಕಾರಿಯೊಬ್ಬರು ಗಾಯದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಮೂರು ವಾರಗಳವರೆಗೆ ಹೊರಗಿಡಲಾಗಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿದ ಪತ್ರಿಕಾ ತಿಳಿಸಿದೆ. ಮಂಗಳವಾರ, ಫೆಬ್ರವರಿ 15 ರಂದು NCA ನಲ್ಲಿ ವರದಿ ಮಾಡಿಕೊಳ್ಳಲಿರುವ ಅವರು NCA ಯಲ್ಲಿ ಕನಿಷ್ಠ ಮೂರು ವಾರಗಳನ್ನು ಕಳೆಯಬೇಕಾಗುತ್ತದೆ.

ಅವರ ಸ್ಥಾನಕ್ಕೆ ಬಿಸಿಸಿಐ ಎಡಗೈ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಬದಲಿಯಾಗಿ ನೇಮಿಸಿದೆ. ಕುಲದೀಪ್ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ODI ನಲ್ಲಿ ಭಾರತ ತಂಡಕ್ಕೆ ಪುನರಾಗಮನ ಮಾಡಿ ಬಹಳ ಪ್ರಭಾವ ಬೀರಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್(ಉಪನಾಯಕ) (ವಿಕೆಟ್ ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹದ್. ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...