alex Certify ಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ…!

ಖ್ಯಾತ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ. ಸ್ವತಃ ಪಾಂಡ್ಯ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಭಾವಿ ಪತ್ನಿ ನತಾಶ ಜೊತೆಗಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿರುವ ಹಾರ್ದಿಕ್ ಪಾಂಡ್ಯ, ನಾವಿಬ್ಬರೂ ಜೊತೆಯಾಗಿ ಹೊಸ ಜೀವವೊಂದನ್ನು ಸ್ವಾಗತಿಸಲು ಕಾತರಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಹೊಸ ವರ್ಷದ ಆರಂಭದ ದಿನದಂದು ಹಡಗಿನಲ್ಲಿ ಸೆರ್ಬಿಯಾ ಮೂಲದ ನಟಿ ನತಾಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ 26 ವರ್ಷದ ಹಾರ್ದಿಕ್ ಪಾಂಡ್ಯ ಈ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಮದುವೆಗೂ ಮುನ್ನವೇ ತಾವು ತಂದೆಯಾಗುತ್ತಿರುವ ವಿಷಯವನ್ನು ಪ್ರಕಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...