alex Certify ಜನ್ಮದಿನದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಟಾಪ್ 5 ದಾಖಲೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಟಾಪ್ 5 ದಾಖಲೆಗಳು

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು 33 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಬರ್ತಡೇ ಸಂಭ್ರಮದಲ್ಲಿ ಅವರು ಮಾಡಿದ ಪ್ರಮುಖ 5 ಸಾಧನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

2008 ರಲ್ಲಿ ಪಾದಾರ್ಪಣೆ ಮಾಡಿದ ನಂತರ ಕೊಹ್ಲಿ ರಾಷ್ಟ್ರೀಯ ತಂಡಕ್ಕಾಗಿ 254 ಏಕದಿನ, 96 ಟೆಸ್ಟ್ ಮತ್ತು 92 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಹಲವಾರು ದಾಖಲೆ ಮಾಡಿದ್ದಾರೆ. ಕ್ರಿಕೆಟ್ ನ ಎಲ್ಲಾ ಮೂರು ಸ್ವರೂಪಗಳಲ್ಲಿ 50-ಪ್ಲಸ್ ಸರಾಸರಿಯನ್ನು ಹೊಂದಿರುವ ಏಕೈಕ ಬ್ಯಾಟರ್ ಆಗಿದ್ದಾರೆ.

ವಿರಾಟ್ ಕೊಹ್ಲಿ 57 ಸಲ ಪಂದ್ಯದ ಆಟಗಾರ ಎಂದು ಪ್ರಶಸ್ತಿ ಪಡೆದಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ 3 ನೇಯವರಾಗಿದ್ದಾರೆ.

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 15 ಶತಕಗಳನ್ನು ಗಳಿಸಿದ್ದಾರೆ. ಒಂದೇ ಎದುರಾಳಿ ತಂಡದ ವಿರುದ್ಧ ಇಷ್ಟು ಶತಕಗಳನ್ನು ಗಳಿಸಿದ ನಾಲ್ಕನೇ ಆಟಗಾರ ಅವರಾಗಿದ್ದಾರೆ.

ಅವರು ಕ್ಯಾಲೆಂಡರ್ ವರ್ಷದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಒಂದೇ ವರ್ಷದಲ್ಲಿ 2818(2017 ರಲ್ಲಿ) ರನ್ ಗಳಿಸಿದ್ದಾರೆ. ಶ್ರೀಲಂಕಾದ ಕ್ರಿಕೆಟಿಗ ಕುಮಾರ ಸಂಗಕ್ಕಾರ(2868 ರನ್) ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(2833 ರನ್) ಅವರ ನಂತರದ ಸ್ಥಾನದಲ್ಲಿದ್ದಾರೆ.

ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ನಂತರದ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,150 ರನ್ ಗಳಿಸಿದ್ದಾರೆ. ಅವರು ಎಲ್ಲಾ ಮಾದರಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ 7ನೇ ಆಟಗಾರರಾಗಿದ್ದಾರೆ.

96 ಟೆಸ್ಟ್ ಪಂದ್ಯಗಳಲ್ಲಿ 162 ಇನ್ನಿಂಗ್ಸ್ ಆಡಿರುವ 7765 ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ, 7 ದ್ವಿಶತಕ, 27 ಅರ್ಧ ಶತಕ ಗಳಿಸಿದ್ದಾರೆ.

254 ಏಕದಿನ ಪಂದ್ಯಗಳಲ್ಲಿ 12,169 ರನ್ ಗಳಿಸಿದ್ದು, 43 ಶತಕ, 62 ಅರ್ಧ ಶತಕ ಗಳಿಸಿದ್ದಾರೆ.

92 ಟಿ20 ಪಂದ್ಯಗಳಲ್ಲಿ 3225 ರನ್ ಗಳಿಸಿದ್ದು, 29 ಅರ್ಧ ಶತಕ ಗಳಿಸಿದ್ದಾರೆ

207 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 6283 ರನ್ ಗಳಿಸಿದ್ದು, 5 ಶತಕ, 42 ಅರ್ಧ ಶತಕ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...