alex Certify 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಸಾಧನೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಸಾಧನೆ ಮಾಹಿತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಅಂಡರ್ 19 ತಂಡದ ನಾಯಕನಾಗಿದ್ದ ಅವರು 2008ರ ಆಗಸ್ಟ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಂತತರಾಷ್ಟ್ರೀಯ ಕ್ರಿಕೆಟ್ ನಲ್ಲಿ 70 ಶತಕ, 118 ಅರ್ಧ ಶತಕ ಗಳಿಸಿದ್ದಾರೆ.

96 ಟೆಸ್ಟ್ ಪಂದ್ಯಗಳಲ್ಲಿ 162 ಇನ್ನಿಂಗ್ಸ್ ಆಡಿರುವ 7765 ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ, 7 ದ್ವಿಶತಕ, 27 ಅರ್ಧ ಶತಕ ಗಳಿಸಿದ್ದಾರೆ.

254 ಏಕದಿನ ಪಂದ್ಯಗಳಲ್ಲಿ 12,169 ರನ್ ಗಳಿಸಿದ್ದು, 43 ಶತಕ, 62 ಅರ್ಧ ಶತಕ ಗಳಿಸಿದ್ದಾರೆ.

92 ಟಿ20 ಪಂದ್ಯಗಳಲ್ಲಿ 3225 ರನ್ ಗಳಿಸಿದ್ದು, 29 ಅರ್ಧ ಶತಕ ಗಳಿಸಿದ್ದಾರೆ

207 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 6283 ರನ್ ಗಳಿಸಿದ್ದು, 5 ಶತಕ, 42 ಅರ್ಧ ಶತಕ ದಾಖಲಿಸಿದ್ದಾರೆ.

2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದ ಕೊಹ್ಲಿ ದಂಪತಿಗೆ ಒಂದು ಮಗು ಇದೆ. ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಿರುವ ಕೊಹ್ಲಿ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...